ಚಂದನ ಬಾಲ ಮಹಿಳಾ ಸಮಾಜ, ಹವಗಿ ಕಾರವಾರ ಜಿಲ್ಲೆ

ಚಂದನಬಾಲಾ ಮಹಿಳಾ ಮಂಡಲವು 26/01/2012 ರಂದು ಸ್ಥಾಪಿಸಲಾಯಿತು. ಮೊದಲನೆಯ ಅಧ್ಯಕ್ಷರಾಗಿ ಶ್ರೀಮತಿ ಲಲಿತಾ ಉಪಾಧ್ಯೆ, ಉಪಾಧ್ಯಕ್ಷರಾಕಿ ಶ್ರೀಮತಿ ಕಲ್ಪನಾ ಪಾಟೀಲ್ ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ವಸುಧಾ ಪಾಟೀಲ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಅಂದು 35 ಜನ ಸದಸ್ಯರೊಂದಿಗೆ ತಮ್ಮ ಕಾರ್ಯವನ್ನು ಆರಂಭಿಸಿದ ಮಂಡಳ ಇಂದು 65 ಜನ ಸದಸ್ಯರನ್ನು ಹೊಂದಿದೆ. ದಿನಾಂಕ:26/01/2024 ನಮ್ಮ ಮಂಡಳಕ್ಕೆ 12 ವರ್ಷ ಪೂರೈಸಿದ ಸಂತೋಷ. ಈ ಶುಭ ಸಂದರ್ಭದಲ್ಲಿ ಇದನ್ನು ಇನ್ನೊಂದು ಹೆಜ್ಜೆ ಮುಂದೆ ಇಟ್ಟು ಮಂಡಲವನ್ನು ಟ್ರಸ್ಟ್ ಆಗಿ ರಚನೆ ಮಾಡಿದೆವು. ಅಧ್ಯಕ್ಷರಾಗಿ ಶ್ರೀಮತಿ ಕಲ್ಪನಾ ಪಾಟೀಲ್ 9481407942, ಉಪಾಧ್ಯಕ್ಷರಾಗಿ ಶ್ರೀಮತಿ ರಾಜಶ್ರೀ ಅಂಬಿಪ್ಪಿ 6363779058 ಹಾಗೂ ಕಾರ್ಯದರ್ಶಿಯಾಗಿ ಶ್ರೀಮತಿ ಮಯೂರಿ ಎಬ್ರೆರ್ 9008946019 ಹಾಗೂ 14 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿನ ದಿನಗಳಲಿ ನಮ್ಮ ಮಹಿಳಾ ಮಂಡಳದಿಂದ ನಡೆಸುತ್ತಿರುವ ಕಾರ್ಯಕ್ರಮಗಳು ಈ ಕೆಳಗಿನಂತಿವೆ. 

ಪ್ರತಿ ವರ್ಷ ಚಾತುರ್ಮಾಸದಲ್ಲಿ ವಿಧಾನಗಳನ್ನು ಆಯೋಜಿಸುವ ಉದ್ದೇಶ ಎಲ್ಲರನ್ನೂ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವುದು. 

ನವರಾತ್ರಿಯಲ್ಲಿ ದೇವಿ ಅಲಂಕಾರ ಪೂಜೆಯಲ್ಲಿ ಪ್ರತಿದಿನ ಧಾರ್ಮಿಕ, ಸಾಂಸ್ಕೃತಿಕ ಮತ್ತು ಇತರೆ ಕಾರ್ಯಕ್ರಮಗಳನ್ನು ಆಯೋಜಿಸುವುದು, ವಿಜೇತರಿಗೆ ಬಹುಮಾನಗಳನ್ನು ನೀಡಿ ಗೌರವಿಸುವುದು. 

ಸಣ್ಣವರಿಂದ ಹಿಡಿದು ದೊಡ್ಡವರಿಗೆ ಪಾಲ್ಗೊಳ್ಳಲು ಪ್ರೇರೇಪಿಸಿ, ಅವರಿಗೆ ಬಹುಮಾನಗಳನ್ನು ನೀಡುವುದು. 

1008 ಭಗವಾನ್ ಮಹಾವೀರ ಜನ್ಮಕಲ್ಯಾಣ ಮಹೋತ್ಸವ ಅಂಗವಾಗಿ ವಿವಿಧ ಸ್ಪರ್ಧೆಗಳ ಆಯೋಜನೆ ಹಾಗೂ ರಕ್ತದಾನ ಶಿಬಿರ ಏರ್ಪಡಿಸುವುದು, ರಕ್ತದಾನ ಮಾಡಿದವರಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಗುವುದು. ಆರೋಗ್ಯಕರ ಸಮಾಜವನ್ನು ಬೆಳೆಸುವ ದೃಷ್ಟಿಯಿಂದ ವಿವಿಧ ಆರೋಗ್ಯ ಶಿಬಿರಗಳನ್ನು ಏರ್ಪಡಿಸುವುದು. 

ಸದ್ಯ ನಾವು ಮಾಡಿರುವ ಶಿಬಿರಗಳು ಥೈರಾಯ್ಡ್ ಟೆಸ್ಟ್ ಮತ್ತು ಆರೋಗ್ಯ ತಪಾಸಣೆ ಇವುಗಳನ್ನು ಹೊರತುಪಡಿಸಿ ನಮ್ಮ ಮಂಡಳ ವತಿಯಿಂದ ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಈ ವರ್ಷದಿಂದ ಇದನ್ನು ಪ್ರಾರಂಭಿಸಿದ್ದೇವೆ. ದಾಂಡೇಲಿಯ ವನವಾಸಿ ಕೇಂದ್ರಕ್ಕೆ ತಮ್ಮ ಮಂಡಳ ವತಿಯಿಂದ ಆಹಾರ ಸಾಮಗ್ರಿಗಳ ವಿತರಣೆ ಮಾಡಿದೆವು. ಈ ರೀತಿ ನಮ್ಮ ಮಂಡಲವು ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಹಂತ-ಹಂತವಾಗಿ ಬೆಳೆಯುತ್ತಿದೆ. ನಿಮ್ಮ ಜೊತೆಗೂಡಿ ಇನ್ನಷ್ಟು ಬೆಳೆಯುವ ಆಸೆ ನಮ್ಮದಾಗಿದೆ. 

ಅಧ್ಯಕ್ಷರು

ಚಂದನ್ ಬಾಲಾ ಮಹಿಳಾ ಮಂಡಳ, ಹವಗಿ.

ಪದ್ಮಾವತಿ ಮಹಿಳಾ ಸಮಾಜ

ಮಾಗಡಿ ರಸ್ತೆ, ಸುವರ್ಣ ಪಾರ್ಶ್ವನಾಥ ಬಸದ, ಬೆಂಗಳೂರು

ಶ್ರೀಪದ್ಮಾವತಿ ಮಹಿಳಾ ಸಮಾಜವು 09/11/2001ರಂದು ಬಸದಿಯ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಶ್ರೀಮತಿ ಕಮಲಾ ಹಂಪನಾ ಅವರಿಂದ ಉದ್ಘಾಟನೆಗೊಂಡು ಶ್ರೀಮತಿ ಪುಷ್ಪಾ ರಾಜಪ್ಪನವರ ಅಧ್ಯಕ್ಷತೆಯಲ್ಲಿ ಪ್ರಾರಂಭವಾಯಿತು. ಶ್ರೀಮತಿ ವಿಜಯ ವಿದ್ಯಾರತ್ನ ಉಪಾಧ್ಯಕ್ಷರಾಗಿ ಶ್ರೀಮತಿ ಪದ್ಮಿನಿ ಪದ್ಮರಾಜ ಕಾರ್ಯದರ್ಶಿಗಳಾಗಿ ಆಯ್ಕೆಯಾದರು. 

ಬಸದಿಯಲ್ಲಿ ನಡೆಯುವ ಅನಂತನೋಂಪಿ ಅಷ್ಟಾಹ್ನಿಕ, ಹಬ್ಬ ಹರಿದಿನಗಳಲ್ಲಿ ಬಸದಿಯ ಕಾರ್ಯಕ್ರಮಗಳಲ್ಲಿ ಸಹಕಾರ ನೀಡಲು ಸಮಾಜ ಸ್ಥಾಪನೆಯಾಯಿತು. ಆ ನಂತರ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ಮಾಡುತ್ತಾ ಮುಂದುವರೆಯುತ್ತಿದೆ. 

ಸಾಮಾಜಿಕ ಕಾರ್ಯಗಳು : 

2009ರಲ್ಲಿ ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ನೆರೆಹಾವಳಿಗೆ ತುತ್ತಾದ ಸುಮಾರು 60 ಕುಟುಂಬಗಳಿಗೆ ನಮ್ಮ ಸಮಾಜದಿಂದ ದಿನನಿತ್ಯದ ಅವಶ್ಯಕ ವಸುಗಳಾಗಿ ಪಾತ್ರೆಗಳು, ಕುಕ್ಕರ್ ಮುಂತಾದ ವಸ್ತುಗಳನ್ನು ಒಕ್ಕೂಟದವರ ಕೋರಿಕೆಯ ಮೇರೆಗೆ ನೀಡಲಾಯಿತು. ನಮ್ಮ ಸಮಾಜದಿಂದ ಸುಮಾರು 85 ಸಾವಿರ ರೂಪಾಯಿಗಳನ್ನು ನೀಡಲಾಯಿತು. ಶ್ರೀಮತಿ ಸುಜಯ ಪ್ರಸನ್ನಕುಮಾರವರು 25 ಸಾವಿರ ರೂಪಾಯಿಗಳನ್ನು ಕೊಟ್ಟು ಸಹಕಾರ ನೀಡಿದ್ದಾರೆ. 

ಕೊರೋನಾ ಸಮಯದಲ್ಲಿ 2 ಸಾವಿರ ಬೆಲೆ ಬಾಳುವ ದಿನಸಿ ಸಾಮಾನುಗಳ ಕಿಟ್‌ಗಳನ್ನು ಸುಮಾರು 25 ಜನ ಬಡವರಿಗೆ ನೀಡಲಾಯಿತು. 

ಸಾಮಾಜಿಕ ಕಾರ್ಯಗಳು : 

ಪ್ರತಿವರ್ಷ 8 ರಿಂದ 14 ವರ್ಷದ ಮಕ್ಕಳಿಗೆ ಧಾರ್ಮಿಕ ಶಿಬಿರ ಆಯೋಜಿಸಿ, ಧರ್ಮದ ವಿಷಯಗಳನ್ನು ಅವರಿಗೆ ತಿಳಿಸಿಕೊಡುತ್ತೇವೆ. ಶ್ರೀಮತಿ ಸಿ.ಪಿ.ಕುಸುಮಾರವರು ಸಂಪಾದಿಸಿರುವ “ಸುಗಂಧ ದಶಮಿ” ನೋಂಪಿಯ ವಿಧಾನದ ಕೃತಿಯನ್ನು ನಮ್ಮ ಸಮಾಜದ ಹೆಸರಿನಲ್ಲಿ ಶ್ರೀಮತಿ ವಿಜಯ ವಿದ್ಯಾರತ್ನರಾಜ್, ಮತ್ತು ಪದ್ಮಿನಿ ಪದ್ಮರಾಜ್‌ರವರ ನೆರವಿನಿಂದ ಒಕ್ಕೂಟದ ವತಿಯಿಂದ ಹೊರತಂದು ಎಲ್ಲ ಬಸದಿಗಳಿಗೆ ಕಳಿಸಿಕೊಡಲಾಯಿತು. ಪ್ರತಿವರ್ಷ ನಡೆಯುವ ಅನಂತ ನೋಂಪಿ ವೃತಿಕರಿಗೆ ಶುದ್ಧ ಭೋಜನದ ವ್ಯವಸ್ಥೆಯನ್ನು ಮಹಿಳಾ ಸಮಾಜದ ಸದಸ್ಯರೆಲ್ಲರ ಸಹಕಾರದಿಂದ ಮಾಡಲಾಗುತ್ತಿದೆ.  ಬಸದಿಯಲ್ಲಿ ನಡೆಯುವ ಮಹಾವೀರ ಜಯಂತಿಯ ತೊಟ್ಟಿಲು ಅಲಂಕಾರ ಮತ್ತು ಪೂಜೆ, ಆರತಿಯನ್ನು ಮಾಡುವುದರ ಜೊತೆಗೆ ದಸರಾ ಹಬ್ಬದಲ್ಲಿಯೂ ಒಂದು ದಿನದ ಪೂಜಾ ಸೇವೆಯನ್ನು ಸಮಾಜದ ವತಿಯಿಂದ ಮಾಡಲಾಗುತ್ತದೆ. ಸದಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಶ್ರೀಮತಿ ಪದ್ಮಿನಿ ಪದ್ಮರಾಜ್‌ರವರು 2018ರಲ್ಲಿ ಒಕ್ಕೂಟದ ಕಾರ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವದು ನಮ್ಮ ಸಮಾಜನದ ಘನತೆಯನ್ನು ಹೆಚ್ಚಿಸಿದೆ. 

ಧರ್ಮ ಪ್ರಭಾವನೆ : 

2019ರ ಮಾರ್ಚ್ ತಿಂಗಳಲ್ಲಿ ಧರ್ಮಸ್ಥಳದಲ್ಲಿ ನಡೆದ ಬಾಹುಬಲಿ ಮಸ್ತಕಾಭಿಷೇಕದಲ್ಲಿ ನಮ್ಮ ಸಮಾಜದ ಸದಸ್ಯರೆಲ್ಲರೂ ಕೂಡಿ ಶ್ರೀಗಂಧ ಅಭಿಷೇಕ, ಎಳನೀರಿನ ಅಭಿಷೇಕ, ಕಬ್ಬಿನ ಹಾಲಿನ ಅಭಿಷೇಕ ಹೀಗೆ 2 ಲಕ್ಷ 50 ಸಾವಿರ ರೂಪಾಯಿಗಳ ದ್ರವ್ಯಗಳನ್ನು ಪಡೆದು ಭಕ್ತಿಯಿಂದ ಅಭಿಷೇಕ ಮಾಡಿ ಪುಣ್ಯಶಾಲಿಗಳಾಗಿದ್ದೇವೆ. ರಾಜ್ಯದಾದ್ಯಂತ ನಡೆಯುವ ಪಂಚಕಲ್ಯಾಣ, ಅಭಿಷೇಕಗಳಲ್ಲಿ ತನು, ಮನ, ಧನದೊಂದಿಗೆ ಉತ್ಸಾಹದಿಂದ ಎಲ್ಲ ಸದಸ್ಯರು ಭಾಗವಹಿಸುತ್ತಿರುವದು ಹೆಮ್ಮೆಯ ಸಂತೋಷದ ವಿಷಯ. 

ಅಧ್ಯಕ್ಷರು : ಶ್ರೀಮತಿ ವಿಜಯ ವಿದ್ಯಾರತ್ನರಾಜ್ : 8088457830

ಕಾರ್ಯದರ್ಶಿ : ಶ್ರೀಮತಿ ಪದ್ಮಿನಿ ಪದ್ಮರಾಜ್ : 914109773

 

ಚಂದನ ಬಾಲಮಹಿಳಾ ಸಮಾಜ ಹವಗಿ ಕಾರವಾರ ಜಿಲ್ಲೆ- 028284221070

 

Sl No. ID No. Name Designation Contact Number Photo
1 AKJMO-0220 ಕಲ್ಪನಾ ಪ್ರಕಾಶ್ ಪಾಟೀಲ ಅಧ್ಯಕ್ಷರು 94814 07942
1 AKJMO-0221 ಪದ್ಮಶ್ರೀ ಅಮಿತ್ ಪಂಡಿತ್ ಸದಸ್ಯರು 87470 56888