ದಿಗಂಬರ ಜೈನ ಮಹಿಳಾ ಸಮಾಜ, ಹುಬ್ಬಳ್ಳಿ

ಪ್ರತಿ ವರ್ಷ ಮಕ್ಕಳಿಗೆ, ಶ್ರಾವಕ, ಶ್ರಾವಕಿಯರಿಗೆ ವಸತಿ, ಊಟ ಸೌಲಭ್ಯದೊಂದಿಗೆ, ಶ್ರೀ ಮುನಿರಾಜ ರೆಂಜಾಳ ಅವರ ಸಾರಥ್ಯದಲ್ಲಿ ಧಾರ್ಮಿಕ ಶಿಬಿರ ಹಮ್ಮಿಕೊಳ್ಳುತ್ತೇವೆ. ಇದರ ಉದ್ಘಾಟನೆಯನ್ನು ಪ್ರತಿ ವರ್ಷ ಶ್ರೀಮತಿ ಪದ್ಮಲತಾ ನಿರಂಜನ್ ಅವರು ನಿರಂಜನ ಸ್ತುತಿಯೊಂದಿಗೆ ಉದ್ಘಾಟಿಸುತ್ತಾರೆ. 

ಪ್ರತಿವರ್ಷ ಜೈನ ಧರ್ಮದ ಅಹಿಂಸಾ ತತ್ವನ್ನು ಜನತೆಗೆ ಸಾರಸಲು, ಸರ್ವಧರ್ಮ, ಎಲ್ಲಾ ಸಾಮಾಜಿಕ ಸಂಘಟನೆಗಳನ್ನು ಸೇರಿಸಿ ಹುಬ್ಬಳ್ಳಿಯಲ್ಲಿ ಕಿತ್ತೂರುರಾಣಿ ಚೆನ್ನಮ್ಮ ಸರ್ಕಲ್‌ನಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಹಿಂಸಾ ವಾಕ್ ಏರ್ಪಡಿಸುತ್ತೇವೆ, ಪ್ರಸಾದ ವಿತರಣೆ ಮಾಡುತ್ತೇವೆ. 

ದಸರಾ ಹಬ್ಬದಲ್ಲಿ ಒಂದು ದಿನ ಅತ್ಯಂತ ವಿಜೃಂಭಣೆಯಿಂದ ದೇವಿಯ ಅಷ್ಟವಾದನ ಪೂಜೆ, ಪಲ್ಲಕ್ಕಿ, ಮೆರವಣಿಗೆ, ದಾಂಡಿಯಾ ನೃತ್ಯ, ಪ್ರಸಾದ ವಿತರಣೆ ಇರುತ್ತದೆ. 

ಶ್ರೀ ಸಮ್ಮೇಧ ಶಿಖರಜಿ ಉಳಿಸಿ ಆಂದೋಲನದಲ್ಲಿ ಪೂರ್ತಿ ಜವಾಬ್ದಾರಿಯೊಂದಿಗೆ ಬೃಹತ್ ಹೋರಾಟ. 

ರತ್ನಾಕರ ಶ್ರಾವಕಾಚಾರ ತಂಡದ ಶ್ರೀ ಜಿನರಾಜಬಂಗ ಅವರು ಆಯೋಜಿಸಿರುವ ನಮೋಕಾರ ಮಂತ್ರ ಪಠಾಣೆಯಲ್ಲಿ ಪಾಲ್ಗೊಳ್ಳುವಿಕೆ. 

ಜಿನಭಜನೆಯಲ್ಲಿ ಹುಬ್ಬಳ್ಳಿಯಲ್ಲೇ ಪ್ರಥಮ ಬಾರಿಗೆ ಮಕ್ಕಳ 3 ತಂಡ ಕಟ್ಟಿ ಭಾಗವಹಿಸಲು ಸಹಾಯ ಮತ್ತು ಪ್ರೋತ್ಸಾಹ. 

ನಮ್ಮ ಕಮಿಟಿಯ ಸದಸ್ಯೆಯರು ಜಿನ ಭಜನೆಯಲ್ಲಿ ಪಾಲ್ಗೊಂಡಿದ್ದಾರೆ.

ಪೂಜ್ಯ ಖಾವಂದಾರರು ಲೋಕಾ ಸಭಾ ಸದಸ್ಯರಾಗಿ ಆಯ್ಕೆ ಆದಾಗ ಹುಬ್ಬಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ ಪೂಜ್ಯರ ಫೋಟೋ ಹಿಡಿದು ಸಹಸ್ರಾರು ಮಹಿಳೆಯರು ಸೇರಿ ಅಭಿನಂದನೆ ಸಲ್ಲಿಸಿದರು. ಆಜಾದಿ ಅಮೃತ್ ಮಹೋತ್ಸವದ ಅಂಗವಾಗಿ ಕಿತ್ತೂರು ರಾಣಿ ಸರ್ಕಲ್‌ನಲ್ಲಿ ಅತ್ಯಂತ ದೊಡ್ಡ ರಂಗೋಲಿ ಬಿಡಿಸಲಾಗಿತ್ತು, ಸನ್ಮಾನ್ಯ ಸಂಸದರು ಮತ್ತು ಕೇಂದ್ರದ ಮಂತ್ರಿಗಳಾದ ಶ್ರೀ ಪ್ರಹ್ಲಾದ್ ಜೋಶಿ. ಮೇಯರ್ ಹಾಗೂ ಹಲವಾರು ರಾಜಕೀಯ ಧುರೀಣರು ಸ್ವತಃ ಬಂದು ವೀಕ್ಷಿಸಿದರು. 

ನಮ್ಮ ಮಹಿಳಾ ಸಮಾಜದ ಅಧ್ಯಕ್ಷರಾದ ತ್ರಿಶಲ ಮಾಲ್ಗತ್ತಿ ಅವರನ್ನು ಜಗದ್ಗುರು ಪರಮ ಪೂಜ್ಯ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಶ್ರೀ ಕ್ಷೇತ್ರ ಶ್ರವಣಬೆಳಗೊಳಕ್ಕೆ ಕರೆದು ಪರಮ ಪೂಜ್ಯ ವಿಶಾಶ್ರೀ ಮಾತಾಜಿ ಮತ್ತು 13 ಜನ ಸಾಧುಗಳ ತಂಡದ ಹುಬ್ಬಳ್ಳಿ ಚಾತುರ್ಮಾಸದ ಮತ್ತು ಆಹಾರ ವಿಹಾರದ ಪೂರ್ತಿ ಜವಾಬ್ದಾರಿ,

ಐತಿಹಾಸಿಕ ಕಾರ್ಯಕ್ರಮ: ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ ಪ್ರಚಾರದ ಅಂಗವಾಗಿ ಹುಬ್ಬಳ್ಳಿಯಲ್ಲಿ 1008 ಮಹಿಳೆಯರಿಂದ ಬಾಹುಬಲಿ ಸ್ವಾಮಿ ಜಗಕೆಲ್ಲ ಸ್ವಾಮಿ, ಭಕ್ತಿ ಗೀತೆಯನ್ನು ಏಕರೀತಿಯ ಸಮವಸ್ತ್ರ ಧರಿಸಿ ಸಮೂಹಗಾಯನ ಮತ್ತು ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ ಎಲ್ಲಾ ಊರುಗಳಿಂದ 57 ಬಸ್‌ಗಳಿಂದ ಕರೆಸಿ 2018 ಮಹಿಳೆಯರಿಂದ ವಿಂಧ್ಯಗಿರಿ ಬೆಟ್ಟದ ಶ್ರೀ ಬ್ರಹ್ಮದೇವರ ತಳದಿಂದ ಮಹಾದ್ವಾರದವರೆಗೆ ನಿಂತು ಏಕವಸ್ತ್ರ ಧರಿಸಿ ಬಾಹುಬಲಿ ಸ್ವಾಮಿ ಜಗಕೆಲ್ಲ ಸ್ವಾಮಿ ಭಕ್ತಿ ಗೀತೆ ಸಮೂಹ ಗಾಯನ. 

ಶ್ರೀ ಕ್ಷೇತ್ರ ಧರ್ಮಸ್ಥಳ ಪೂಜ್ಯ ಖಾವಂಧರರಿಗೆ ಚ್ಯುತಿ ಬಂದಾಗ, ಪಟ್ಟಭದ್ರ ಹಿತಾಸಕ್ತಿಗಳು ಕಪ್ಪುಚುಕ್ಕಿ ತರಲು ಯತ್ನಿಸಿದಾಗ ಹೋರಾಟ, ತಹಶೀಲ್ದಾರ್ ಮನವಿ, ಎಲ್ಲಾ ಬಸದಿಗಳಲ್ಲಿ ವಿಶೇಷ ಪೂಜೆ ಸಲ್ಲಿಸಲು ಪೂರ್ತಿ ಜವಾಬ್ದಾರಿ ಹಾಗೂ ಶ್ರೀ ಕ್ಷೇತ್ರ ಶ್ರವಣಬೆಳಗೊಳದಲ್ಲಿ 37 ಜನ ಮಹಿಳಾ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜ್ಯ ಮಟ್ಟದ ಆಚಾರ್ಯ ಶ್ರೀ ಶಾಂತಿಸಾಗರ ವಯ್ಯಾವೃತ್ತಿ ಪ್ರಶಸ್ತಿ ಪುರಸ್ಕಾರವನ್ನು ಶ್ರಾವಕಿಯರನ್ನು ಧಾರ್ಮಿಕ, ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿ ಪ್ರಶಸ್ತಿ ಕೊಡಲಾಗುವುದು. 

ನವಗ್ರಹ ತೀರ್ಥ ಕ್ಷೇತ್ರ ವರೂರು ಇಲ್ಲಿಯ ಆಚಾರ್ಯ ಶ್ರೀ ಗುಣಧರ ನಂದಿಮುನಿ ಮಹಾರಾಜರ ಆಶೀರ್ವಾದ, ಮಾರ್ಗದರ್ಶನದಿಂದ  ಎಲ್ಲಾ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಿಕೆ. 

ಯುವತಿಯರ ವೇದಿಕೆ :  

ಪ್ರಥಮ ಬಾರಿಗೆ ಹುಬ್ಬಳ್ಳಿಯಲ್ಲಿ ಯುವಜನತೆಗೊಂದು – ಡಿ.ಜೆ.ಯುವ ಬೆಟಾಲಿಯನ್ ಹುಬ್ಬಳ್ಳಿ, ಸಂಘಟನೆ ಸ್ಥಾಪನೆ. 

ಮಹಾವೀರ ಭಗವಾನರ ಸಂದೇಶಗಳನ್ನು ಸಾರುವ ಮಹಿಳಾ ದ್ವಿಚಕ್ರ ರ‍್ಯಾಲಿ ಮೆರವಣಿಗೆಯಲ್ಲಿ ಮಹಿಳೆಯರಿಗೆ ಪೇಟ ಧರಿಸಿ ಪಾಲ್ಗೊಳ್ಳುವಿಕೆ. 

ಶ್ರಾವಕಿಯರಿಗೆ ದೇಸಿ ಫ್ಯಾಶನ್ ಶೋ, ಮಹಿಳೆಯರಿಗೆ ನೇರ ಮಾರುಕಟ್ಟೆಗೆ ಹುಬ್ಬಳ್ಳಿಯಲ್ಲಿ ವಸ್ತುಪ್ರದರ್ಶನ ಮತ್ತು ಮಾರಾಟ. 

ಶ್ರೀ ಕ್ಷೇತ್ರ ಹೊಂಬುಜದ ಪಂಚಕಲ್ಯಾಣದಲ್ಲಿ 40 ಜನರ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ.

ಹುಬ್ಬಳ್ಳಿಯ ಮೂರುಸಾವಿರ ಮಠದ ಮಹಿಳಾ ಕಾಲೇಜಿನಲ್ಲಿ ವೆಬ್ ಡಿಸೈನ್ ಬಗ್ಗೆ ತರಬೇತಿ ಕಾರ್ಯಕ್ರಮ, ಹೀಗೆ ಇನ್ನು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 

ಅಧ್ಯಕ್ಷರು : 

ಶ್ರೀಮತಿ ತ್ರಿಶಲ ಬಿ. ಮಾಲಗತ್ತಿ ಹುಬ್ಬಳ್ಳಿ. – 9916824063

ಶ್ರೀಮತಿ ಅನುಪಮಾ ರೋಖಡೆ, ಹುಬ್ಬಳ್ಳಿ – 944980711

Sl No. ID No. Name Designation Contact Number Photo
1 AKJMO-0703 ತ್ರಿಶಲ ಮಾಲಗತ್ತಿ ಅಧ್ಯಕ್ಷರು 99168 24063
1 AKJMO-0704 ಅನುಪಮ ರೋಖಡೆ ಸದಸ್ಯರು ....
1 AKJMO-0705 ವೀಣಾ ಕುರಕುರಿ ಸದಸ್ಯರು ....
1 AKJMO-0706 ಜಯಶ್ರೀ ಜಗನ್ನವರ್ ಸದಸ್ಯರು ....
1 AKJMO-0707 ಪದ್ಮಾ ಸತನ್ನಾವರ ಸದಸ್ಯರು ....
1 AKJMO-0708 ಉಷ ಬೀಳಿಗಿ ಸದಸ್ಯರು ....
1 AKJMO-0709 ಪದ್ಮಶ್ರೀ ಮೋರಬದ ಸದಸ್ಯರು ....
1 AKJMO-0710 ಮಂಗಳ ಸದಸ್ಯರು ....
1 AKJMO-0711 ಪದ್ಮಾವತಿ ಪಾಟೀಲ ಸದಸ್ಯರು ....
1 AKJMO-0712 ಜ್ಯೋತಿ ದೊಡ್ ಮನಿ ಸದಸ್ಯರು ....
1 AKJMO-0713 ಸ್ಮಿತ ಭಾಗೀ ಸದಸ್ಯರು ....
1 AKJMO-0714 ರೇಖ ಬಳಿಗಾರ್ ಸದಸ್ಯರು ....
1 AKJMO-0715 ರತ್ನಾ ಉಪಾಧ್ಯೆ ಸದಸ್ಯರು ....
1 AKJMO-0716 ನಯನ ಗೊಟಡಿಕೆ ಸದಸ್ಯರು ....
1 AKJMO-0717 ಆಶ ಭಾಗೀ ಸದಸ್ಯರು ....
1 AKJMO-0718 ಸುನಿತಾ ಭಾಗಿ ಸದಸ್ಯರು ....
1 AKJMO-0719 ಚಂದನ ಜವಳಿ ಸದಸ್ಯರು ....
1 AKJMO-0720 ಶ್ರೀದೇವಿ ಚೌಗ್ಲ ಸದಸ್ಯರು ....
1 AKJMO-0721 ಶೋಭ ಶೆಟ್ಟಿ ಸದಸ್ಯರು ....
1 AKJMO-0722 ಸುಮನ್ ಪಂಡಿತ್ ಸದಸ್ಯರು ....
1 AKJMO-0723 ಸುಜಾತಾ ದಯನ್ನವರ್ ಸದಸ್ಯರು ....
1 AKJMO-0724 ಅಂಬಿಕ ಪ್ರಥಮ ಶೆಟ್ಟಿ ಸದಸ್ಯರು ....
1 AKJMO-0725 ಪದ್ಮಾಶ್ರೀ ಪತ್ರವಳಿ ಸದಸ್ಯರು ....
1 AKJMO-0726 ಅರುಣ ಉಪ್ಪಿನ ಸದಸ್ಯರು ....
1 AKJMO-0727 ಪದ್ಮಾವತಿ ಟಿಕಣ್ಣಾವರ ಸದಸ್ಯರು ....