Members
ಶ್ರೀ ಪಾಶ್ವನಾಥ ಬಸದಿ ಮಹಿಳಾ ಟ್ರಸ್ಟ್, ಮಿಸ್ತ್ರಿ ಕೋಟೆ
ಮಿಶ್ರಿಕೋಟಿ ಎಂಬ ಗ್ರಾಮ ಇದು ಕಲಘಟಗಿ ತಾಲೂಕು ಧಾರವಾಡ ಜಿಲ್ಲೆಯಲ್ಲಿ ಒಂದು ಧಾರ್ಮಿಕ ಗ್ರಾಮವಾಗಿದೆ. ಅದರಲ್ಲಿ ಜೈನ ಧರ್ಮವೂ ಒಂದು.
ಈ ಗ್ರಾಮದಲ್ಲಿ ಜೈನ ಧರ್ಮವು ಅನಾದಿಕಾಲದಿಂದಲೂ ತನ್ನ ಗೌರವವನ್ನು ಕಾಪಾಡಿಕೊಂಡಿದೆ. ಮಿಶ್ರಿಕೋಟಿಯಲ್ಲಿ ಯಾವುದೇ ಟ್ರಸ್ಟ್ ಸಮಿತಿಗಳು ಇರಲಿಲ್ಲ. ಜೈನ ಧರ್ಮ ಮುಂದುವರಿಸುವ ಸಲುವಾಗಿ ಮಹಿಳೆಯರೇ ಒಂದು ಸಮಾಜವನ್ನಾಗಿ ಸ್ಥಾಪನೆ ಮಾಡಿದರು. ಸಮಾಜ ಸ್ಥಾಪನೆಯಾದ ವರ್ಷ 2021ರಲ್ಲಿ ಈ ಟ್ರಸ್ಟ್ ನೋಂದಣಿಯನ್ನು 05-03-2021ರಂದು ಕಲಘಟಗಿಯಲ್ಲಿ ಮಾಡಿಸಲಾಯಿತು.
ಈ ಸಮಾಜದ ಸಂಸ್ಥಾಪಕರು, ಸದಸ್ಯರು ಶ್ರೀಮತಿ ನಳಿನಿ ವಿಳಾಸ ಕಳಸೂರ ಅವರು ಹಾಗೂ ಇದಕ್ಕೆ ಎಲ್ಲಾ ಮಿಶ್ರಿಕೋಟಿಯ ಸಮಸ್ತ ಶ್ರಾವಕ ಶ್ರಾವಕಿಯರು.
ಪ್ರತಿ ವರ್ಷವೂ ನಮ್ಮ ಜೈನಬಸದಿಯಲ್ಲಿ ಧಾರ್ಮಿಕ ಸಭೆಯನ್ನು ನೆರವೇರಿಸುತ್ತೇವೆ.
ದಶಲಕ್ಷಣ ನೋಂಪಿಯನ್ನು ಶ್ರೀಮತಿ ತ್ರಿಶಲಾ ಮಾಲಗತ್ತಿ ಮೇಡಂ ಅವರ ಸಮ್ಮುಖದಲ್ಲಿ ನೆರವೇರಿಸಲಾಗಿತ್ತು.
ಅದೇ ರೀತಿ ಚೌವ್ವೀಸ ತೀರ್ಥಂಕರ ಮೂರ್ತಿಯನ್ನು ಕೊಣ್ಣೂರು ಪಂಚಕಲ್ಯಾಣ ಮಹೋತ್ಸವದಲ್ಲಿ ಅಭಿಷೇಕ ಪೂಜೆಗಳೊಂದಿಗೆ ವಿಶ್ರಿಕೋಟಿ ಗ್ರಾಮದಲ್ಲಿ ಶ್ರೀ ಸೋಮದೇವ ಭೈಯಾಜಿಯವರ ಸಮ್ಮುಖದಲ್ಲಿ ಸ್ಥಾಪಿಸಲಾಯಿತು.
ಅದೇ ರೀತಿ ಪ್ರತಿ ವರ್ಷ ಚಾತುರ್ಮಾಸವನ್ನು ಸಹ ಆಚರಿಸುತ್ತೇವೆ.
ನವರಾತ್ರಿಯ್ಲಲಿ ಒಂಭತ್ತು ದಿನ ಪದ್ಮಾವತಿ ಅಮ್ಮನವರಿಗೆ 9 ರೀತಿ ಅಲಂಕಾರವನ್ನು ಹಾಗೂ ಭಜನೆ, ಹಾಡು, ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿಸುತ್ತೇವೆ.
ಹಾಗೂ ಶ್ರಾವಕಿಯರು ಧಾರ್ಮಿಕ ಸಭೆಯಲ್ಲಿ ಭಾಗವಹಿಸಿ ಧರ್ಮದ ಬಗ್ಗೆ ಅರಿವನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಂಹನಗದ್ದೆ ಸೊಂಧಾಮಠ ಹಾಗೂ ಹುಬ್ಬಳ್ಳಿಯಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ಶ್ರಾವಕ ಶ್ರಾವಕಿಯರು ಭಾಗವಹಿಸಿ ಧರ್ಮವನ್ನು ಅರಿತುಕೊಳ್ಳುತ್ತಾರೆ.
ಅಧ್ಯಕ್ಷರು :
ಶ್ರೀಮತಿ ನಳಿನಿ, ಕಳೆಸೂರ
ಫೋ : 9380964854
ಕಾರ್ಯದರ್ಶಿ :
ಶ್ರೀಮತಿ ಸರೋಜಾಜಿ ವರೂರ
ಫೋ : 9945780477
| Sl No. | ID No. | Name | Designation | Contact Number | Photo |
|---|