ಸಮ್ಯಕ್ ಪ್ರಜ್ಞ ಮಹಿಳಾ ಮಂಡಲ, ಧಾರವಾಡ

ಮಹಿಳಾ ಮಂಡಳ ಸ್ಥಾಪನೆ :  ಪ್ರತಿಯೊಂದು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಎಲ್ಲ ಧಾರ್ಮಿಕ ಮತ್ತು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳು ಸುವ್ಯವಸ್ಥಿತವಾಗಿ ಸಾಗಿಕೊಂಡು ಹೋಗುವಲ್ಲಿ ನಾರೀಶಕ್ತಿ ಅವಶ್ಯಕತೆ ಇದ್ದೇ ಇದೆ. ಇದಕ್ಕಾಗಿ ಹಲವಾರು ಮಹಿಳಾ ಮಂಡಳದ ಸಂಘ ಸಂಸ್ಥೆಗಳು ಬೇರೆ ಬೇರೆ ಕಡೆಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆದರೆ ಆಗಿನ ಸಂದರ್ಭದಲ್ಲಿ ಧಾರವಾಡದಲ್ಲಿ ಜೈನ ಸಮಾಜಕ್ಕೆ ಇಂತಹದೊಂದು ಸಂಘದ ಅವಶ್ಯಕತೆ ಕಂಡುಬಂದಿತು. ಆದ್ದರಿಂದ ಈ ನಿಟ್ಟಿನಲ್ಲಿ ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ ವಿಜೇತರಾದ ವಿದೂಷಿ ಕೌಸಲ್ಯ ಧರಣೇಂದ್ರ ಇವರು ಕ್ರಿ. ಶ. 1983ನೇ ಇಸವಿಯಲ್ಲಿ, ಧಾರವಾಡದಲ್ಲಿ ಮಹಿಳಾ ಮಂಡಳವನ್ನು ಸ್ಥಾಪಿಸಿದರು. (ಅಂದು ಈ ಸಂಸ್ಥೆ ರಿಜಿಸ್ಟರ್ ಆಗಿರಲಿಲ್ಲ) ಇದರ ಮೊದಲನೇ ಅಧ್ಯಕ್ಷರಾಗಿ ಶ್ರೀಮತಿ ಶಾರಕ್ಕ ಜವಳಿ ಅವರನ್ನು ಆಯ್ಕೆ ಮಾಡಲಾಯಿತು. ಮುಂದೆ ಇದೇ ಸಂಸ್ಥೆ ವ್ಯಾಪಕವಾಗಿ ಬೆಳೆದು ನಿಂತಾಗ ಅದನ್ನು ರಿಜಿಸ್ಟರ್ ಸಂಸ್ಥೆಯನ್ನಾಗ ಮಾಡಿಸುವ ಅವಶ್ಯಕತೆ ಕಂಡುಬಂದಾಗ 2018ನೇ ಇಸ್ವಿಯಲ್ಲಿ ಪರಮಪೂಜ್ಯ 108 ಬಾಲಾಚಾರ್ಯ ಸಿದ್ಧಸೇನ ಮುನಿ ಮಹಾರಾಜರ ಆಶೀರ್ವಾದ ಮತ್ತು ಕೆಲವು ಹಿರಿಯರ ಸಲಹೆಯ ಮೇರೆಗೆ ಸಹಕಾರ ಸಂಘಗಳ ನೋಂದಣಿ ಕಾನೂನು ಅಡಿಯಲ್ಲಿ ನೊಂದಾಯಿಸಲಾಯಿತು. ಶ್ರೀಮತಿ ಸುಜಾತ ಜಿನದತ್ತ ಹಡಗಲಿ ಇವರು ಅಂದಿನ ಅಧ್ಯಕ್ಷರಾಗಿದ್ದರು. ಆಗ ಧಾರವಾಡ ಜಿಲ್ಲಾ ಮಹಿಳಾ ಸಮಾವೇಶವನ್ನು ಪ. ಪೂ. ಬಾಲಾಚಾರ್ಯ 108 ಶ್ರೀ ಸಿದ್ಧಸೇನ ಮಹಾರಾಜರ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಮಾಡಲಾಯಿತು. ಸಮಾವೇಶದಲ್ಲಿ ಹಲವಾರು ರಾಜಕೀಯ ಗಣ್ಯಮಾನ್ಯರನ್ನು ಕರೆಯಿಸಿ ಸನ್ಮಾನಿಸಲಾಯಿತು. ಇದೇ ರೀತಿ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳನ್ನು ಈ ಸಂಘವು ಪ್ರತಿವರ್ಷವೂ ಮಾಡುತ್ತ ಸಮಾಜದಲ್ಲಿ ತನ್ನ ಹೆಗ್ಗಳಿಎಕಗೆ ಪಾತ್ರವಾಗಿದೆ. ಅದಕ್ಕಾಗಿ ಆಯಾ ಸಮಯದಲ್ಲಿ ಕಾರ್ಯ ನಿರ್ವಹಿಸಿದ ಅಧ್ಯಕ್ಷರು, ಸದಸ್ಯೆಯರು ತನು-ಮನ-ಧನಗಳಿಂದ ಸಹಾಯ ಮಾಡಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಇಂತಹ ಕಾರ್ಯಕ್ರಮಗಳಲ್ಲಿ ಕೆಲವನ್ನು ಹೇಳಬೇಕೆಂದರೆ, ನಮ್ಮ ಮಹಿಳಾ ಮಂಡಳವು ಎಲ್ಲ ಧಾರ್ಮಿಕ ಪರ್ವಗಳನ್ನು, ದಿಗಂಬರ ಸಮಾಜದ ಟ್ರಸ್ಟಿನ ಸಹಕಾರ ಮತ್ತು ಸಹಯೋಗದೊಂದಿಗೆ ವಿಜೃಂಭಣೆಯಿಂದ ನಡೆಸಿಕೊಂಡು ಬರುತ್ತಿದೆ. ಅದರ ಜೊತೆ ಜೊತೆಯಲ್ಲಿ ಮುನಿಗಳ ಹಾಗೂ ತ್ಯಾಗಿಗಳ ಸೇವೆಯನ್ನು ಚಾಚೂ ತಪ್ಪದಂತೆ ಮಾಡಿಕೊಂಡು ಬರುತ್ತಿದ್ದೇವೆ. ಪ್ರತಿ ವರ್ಷ ಮಹಿಳಾ ಮಂಡಳದಿಂದ ಹಲವಾರು ವಿಧಿ ವಿಧಾನಗಳನ್ನು ಮಾಡಲಾಗುತ್ತದೆ. ಪ್ರತಿ ವರ್ಷ ಮಕ್ಕಳಿಗಾಗಿ ಧಾರ್ಮಿಕ ಶಿಬಿರವನ್ನು ನಡೆಸಲಾಗುತ್ತದೆ.  ಇದು ಮಹಿಳಾ ಮಂಡಳ ಸ್ಥಾಪನೆಯಾದ ವರ್ಷದಿಂದ ನಿರಂತರವಾಗಿ ನಡೆದುಕೊಂಡು ಬಂದಿರುತ್ತದೆ. 

ವಿದ್ಯಾರ್ಥಿವೇತನ : ನಮ್ಮ ಮಹಿಳಾ ಮಂಡಳವು ಪ್ರತಿ ವರ್ಷ ಜೈನ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇಕಡ 80ಕ್ಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು ಕೊಡಲಿದೆ. 

ಪ್ರಶಸ್ತಿಗಳು : ನಮ್ಮ ಮಹಿಳಾ ಮಂಡಳಕ್ಕೆ ಜನವರಿ 2011ರಲ್ಲಿ ಧಾರವಾಡದ ವೀರೇಂದ್ರ ಹೆಗ್ಗಡೆ ಕಲಾ ಕ್ಷೇತ್ರದಲ್ಲಿ ಅಖಿಲ ಕರ್ನಾಟಕ ಮಹಿಳಾ ಅಧಿವೇಶನದಲ್ಲಿ “ದಿ ಬೆಸ್ಟ್ (The Best)”  ಮಹಿಳಾ ಮಂಡಳ ಎಂಬ ದ್ವಿತೀಯ ಪ್ರಶಸ್ತಿ ಲಭಿಸಿದೆ. ಕ್ರಿ.ಶ. 2017 ಡಿಸೆಂಬರ್ 10 ರಂದು ಶ್ರವಣಬೆಳಗೊಳದಲ್ಲಿ ನಡೆದ ಜಿನ ಭಜನಾ ಸ್ಪರ್ಧೆಯಲ್ಲಿ ನಮ್ಮ ಮಹಿಳಾ ಮಂಡಳದ ಸದಸ್ಯರು ಎರಡನೇ  ಬಹುಮಾನವನ್ನು ಪಡೆದಿದ್ದಾರೆ. 

ಸಾಮಾಜಿಕ ಚಟುವಟಿಕೆ : ನಮ್ಮ ಮಹಿಳಾ ಮಂಡಳವು ಪ್ರತಿನಿತ್ಯ ಒಂದಲ್ಲ ಒಂದು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುತ್ತಾ ಬಂದಿದೆ. ನಮ್ಮ ಮಹಿಳಾ ಮಂಡಳದ ಸದಸ್ಯರು ಹುಬ್ಬಳ್ಳಿ, ಧಾರವಾಡದ ಪ್ರತಿಷ್ಠಿತ ಸಂಸ್ಥೆಗಳಾದ ಕನ್ನಡ ಸಾಹಿತ್ಯ ಪರಿಷತ್ ಮತ್ತು ಧಾರವಾಡದ ವಿದ್ಯಾವರ್ಧಕ ಸಂಘ ಇಂತಹ ಹಲವಾರು ಸಂಸ್ಥೆಯಲ್ಲಿ ನಡೆಯುವ ಎಲ್ಲ ಹಲವು ಕಾರ್ಯಕ್ರಮಗಳ್ಲಲಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. ಪ್ರತಿ ಚತುರ್ದಶಿಯಂದು ಆದಿನಾಥ ಬಸದಿಯಲ್ಲಿ ಭಕ್ತಾಮರ ಸ್ತೋತ್ರ ಪಠಣ ಹಾಗೂ 48 ದ್ವೀಪಗಳ ಪ್ರಜ್ವಲನೆಯನ್ನು ಮಾಡುತ್ತೇವೆ. ಪ್ರತಿವರ್ಷವೂ ನಮ್ಮ ಸಂಘದಿಂದ ತೀರ್ಥಕ್ಷೇತ್ರ ದರ್ಶನ ಯಾತ್ರೆ ಏರ್ಪಡಿಸಲಾಗುತ್ತಿದೆ. ಅಲ್ಲದೇ ಪ್ರತಿ ವರ್ಷ ಜನವರಿ ತಿಂಗಳಿನಲ್ಲಿ ಸಂಕ್ರಮಣ ಹಬ್ಬದಲ್ಲಿ  ದೇವಿಗೆ ಉಡಿ ತುಂಬುವ ಮತ್ತು  ಮುತ್ತೈದೆಯರಿಗೆ ಅರಿಶಿನ ಕುಂಕುಮ ಕೊಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.  

ನಮ್ಮ ಮಹಿಳಾ ಮಂಡಳದ ಗೌರವ ಅಧ್ಯಕ್ಷರಾದ ಶ್ರೀಮತಿ ಪದ್ಮಲತಾ ನಿರಂಜನಕುಮಾರ್ (ಎಸ್.ಡಿ.ಎಂ) ಇವರು ಗೌರವಾಧ್ಯಕ್ಷರಾಗಿದ್ದು ನಮ್ಮ ಎಲ್ಲ ಕಾರ್ಯಕ್ರಮಗಳಿಗೂ ಮಾರ್ಗದರ್ಶನ, ಸಹಾಯ ಹಾಗೂ ಸಹಕಾರವನ್ನು ಕೊಡುತ್ತಿದ್ದಾರೆ. ನಮ್ಮ ಮಂಡಳವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಅವರು ಸದಾ ಶ್ರಮಿಸುತ್ತಿದ್ದಾರೆ. 

ಪರಮಪೂಜ್ಯ ಅಮೃತಸೇನ ಕ್ರಿ.ಶ. 2004ನೇ ಇಸ್ವಿಯಲ್ಲಿ ಮಹಾರಾಜರ ವರ್ಷಯೋಗದ ಸಂದರ್ಭದಲ್ಲಿ ಮಂಡಲದಿಂದ 1 ಲಕ್ಷ (ಒಂದು ಲಕ್ಷ) ರೂಪಾಯಿಗಳನ್ನು ಆದಿನಾಥ ಬಸದಿಯ ಸಭಾಭವನದ ಕಟ್ಟಡಕ್ಕೆ ಕೊಡಲಾಗಿದೆ. 

ಈ ರೀತಿಯಾಗಿ ನಮ್ಮ ಮಹಿಳಾ ಮಂಡಳದ ಕಾರ್ಯ ವೈಖರಿಗಳು ಪ್ರಗತಿಯತ್ತ ಸಾಗುತ್ತಾ ನಡೆದಿವೆ. 

ಅಧ್ಯಕ್ಷರು

ಸಮ್ಯಕ್ ಪ್ರಜ್ಞಾ ಮಹಿಳಾ ಮಂಡಳ, ಧಾರವಾಡ - 7204697257

 

Sl No. ID No. Name Designation Contact Number Photo
1 AKJMO-0369 ಶುಭಾಂಗಿ ಮುತ್ತಿನ ಅಧ್ಯಕ್ಷರು 94498 29731
1 AKJMO-0370 ನಿರ್ಮಲಾ ಮುಗುದ ಉಪಾಧ್ಯಕ್ಷರು 8147910955
1 AKJMO-0371 ರೂಪಾ ತಡಸ ಕಾರ್ಯದರ್ಶಿ 9945073648
1 AKJMO-0372 ಧನಶ್ರೀ ಡವಳೇ ಖಜಾಂಚಿ 81233 08077
1 AKJMO-0373 ವಿಮಲಾ ಅಷ್ಟಗಿ ಸಹ ಕಾರ್ಯದರ್ಶಿ 9964658364
1 AKJMO-0374 ಶುಬಾಂಗಿ ಮುತ್ತಿನ ಸದಸ್ಯರು 9449829731
1 AKJMO-0375 ಶೋಭಾ ಬಸ್ತಿ ಸದಸ್ಯರು 9164544007
1 AKJMO-0376 ಛಾಯಾ ಶೇಟ್ಟಿ ಸದಸ್ಯರು 9481928605
1 AKJMO-0377 ಲತಾ ಶೇಟ್ಟಿ ಸದಸ್ಯರು 9886699876
1 AKJMO-0378 ಲತಾ ಬಾಳೆಕಾಯಿ ಸದಸ್ಯರು 9481129191
1 AKJMO-0379 ಮಧು ಕುಲಕರ್ಣಿ ಸದಸ್ಯರು 9535648913
1 AKJMO-0380 ಪ್ರತಿಭಾ ಮುತ್ತಿನ ಸದಸ್ಯರು -9886699876
1 AKJMO-0381 ಲತಾ ಖೋತ್ ಸದಸ್ಯರು 9886699876
1 AKJMO-0382 ರೂಪಾ ತಡಸ ಸದಸ್ಯರು 9945073648
1 AKJMO-0383 ಧನಶ್ರೀ ಡವಳೆ ಸದಸ್ಯರು 8123308077
1 AKJMO-0384 ಅಲ್ಕಾ ಳವಂಕಿಮೇ ಸದಸ್ಯರು 9343031352
1 AKJMO-0385 ಲತಾ ಪಾಟೀಲ್ ಸದಸ್ಯರು 7204697257
1 AKJMO-0386 ನೀತಾ ಚಿವಟೆ ಸದಸ್ಯರು 8792278121
1 AKJMO-0387 ಅನುಪಮಾ ಅಣ್ಣಾಜಿ ಸದಸ್ಯರು 9342064205
1 AKJMO-0388 ಇಂದುಮತಿ ಉಪಾಧ್ಯೆ ಸದಸ್ಯರು 9886969551
1 AKJMO-0389 ಮಾಯಾ ದಿಂಡಲಕೊಪ್ಪ ಸದಸ್ಯರು 8095827949
1 AKJMO-0390 ಸರೋಜಾ ರೋಖಡೆ ಸದಸ್ಯರು 9538736526
1 AKJMO-0391 ರಾಧಾ ತುಪ್ಪದ್ ಸದಸ್ಯರು 9535447946
1 AKJMO-0392 ಆಶಾ ಚಿಪ್ರೆ ಸದಸ್ಯರು 8217777809
1 AKJMO-0393 ಪದ್ಮಾ ಡೋರ್ಲೆ ಸದಸ್ಯರು 9980793988
1 AKJMO-0394 ಸುಜಾತಾ ಹಡಗಲಿ ಸದಸ್ಯರು 9008453739
1 AKJMO-0395 ರೇಖಾ ಸಂಗಮಿ ಸದಸ್ಯರು 9481930478
1 AKJMO-0396 ಮಮತಾ ಪಾಟೀಲ್ ಸದಸ್ಯರು 6360493788
1 AKJMO-0397 ದ್ರಾಕ್ಷಾಯಿಣಿ ಚೌಗಲೆ ಸದಸ್ಯರು 8792704759
1 AKJMO-0398 ಯಶೋಧಾ ಅಂಗಡಿ ಸದಸ್ಯರು 9449467430
1 AKJMO-0399 ಪ್ರೇಮಾ ಪಾಟೀಲ್ ಸದಸ್ಯರು 9986129905
1 AKJMO-0400 ಪದ್ಮಾ ಪಾಟೀಲ್ ಸದಸ್ಯರು 9844658245
1 AKJMO-0401 ಪೂಜಾ ನಿರ್ಲೇಕರ ಸದಸ್ಯರು 9611719693
1 AKJMO-0402 ಶಾಂತಾ ತವನಪ್ಪನವರ ಸದಸ್ಯರು 9886051587
1 AKJMO-0403 ಜ್ಯೋತಿ ಮುತ್ತಿನ ಸದಸ್ಯರು 8762886881
1 AKJMO-0404 ವಿಜಯಾ ಹದಳಗಿ ಸದಸ್ಯರು 9448655288
1 AKJMO-0405 ಸುಲೋಚನಾ ಮರೇಣ್ಣವರ ಸದಸ್ಯರು 8553407655
1 AKJMO-0406 ವಿಮಲಾ ಅಷ್ಟಗಿ ಸದಸ್ಯರು 9964658364
1 AKJMO-0407 ಚಂಪಕ್ಕಾ ಪಾಟೀಲ ಸದಸ್ಯರು 8431755288