ಚೈತ್ರೋತ್ಸವ
ಚೈತ್ರೋತ್ಸವ
ಶ್ರೀ ಸನ್ಮತಿ ಮಹಿಳಾ ಮಂಡಳ ಮಾಳಮಾರುತಿ ಬಡಾವಣೆ, ಬಳಿಕಲ್ ಬಸದಿ ಶ್ರೀನಗರ, ಬೆಳಗಾವಿ ವತಿಯಿಂದ, ಮಹಾಂತೇಶ ನಗರದ ಗ್ಲಾಸ್ ಹೌಸಿನಲ್ಲಿ **“ಚೈತ್ರೋತ್ಸವ”** ಕಾರ್ಯಕ್ರಮ ದಿನಾಂಕ 15/4/2026 ರಂದು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ **'ಅಗ್ನಿ ರಹಿತ ಜೈನ ಆಹಾರ'** ಅಡುಗೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಸಾಹಿತಿ ಮತ್ತು **'ಕಾಯಕ ಕಟ್ಟೆ'** ಮಹಿಳಾ ಉದ್ದಿಮೆದಾರರ ಬಳಗದ ಸಂಸ್ಥಾಪಕಿಯಾದ ಶ್ರೀಮತಿ ಆಶಾ ಯಮಕನಮರಡಿ ಯವರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಲಾಗಿತ್ತು. ಪ್ರಸ್ತುತ ಸಮಾಜದಲ್ಲಿ ಮಹಿಳೆ ಹೇಗಿದ್ದಾಳೆ? ಗೌರವಯುತವಾಗಿ ಹೇಗೆ ಬದುಕಬೇಕು, ಹೇಗೆ ಸಬಲರಾಗಬೇಕು ಎಂಬುದರ ಬಗ್ಗೆ ತುಂಬಾ ಚೆನ್ನಾಗಿ ಮಾರ್ಗದರ್ಶನ ಮಾಡಿದರು.
**“ಅಗ್ನಿರಹಿತ ಜೈನ ಆಹಾರ”** ಸ್ಪರ್ಧೆಯಲ್ಲಿ ಸಿಹಿ ಅಡುಗೆ ವಿಭಾಗಗಳಲ್ಲಿ - ಪ್ರಥಮ ಶ್ರೀಮತಿ ಪ್ರತಿಭಾ ಉಪಾಧ್ಯೆ, ದ್ವಿತೀಯ - ಶ್ರೀಮತಿ ಸ್ವರೂಪ ಪಾಟೀಲ, ತೃತೀಯ - ಶ್ರೀಮತಿ ವಿದ್ಯಾಶ್ರೀ ಉಪಾಧ್ಯೆ ಹಾಗೂ ಖಾರ ಅಡುಗೆ ವಿಭಾಗಗಳಲ್ಲಿ - ಪ್ರಥಮ ಶ್ರೀಮತಿ ಪ್ರತಿಭಾ ಉಪಾಧ್ಯೆ, ದ್ವಿತೀಯ - ಶ್ರೀಮತಿ ಪ್ರಜ್ವಲರಾಣಿ ಭೋಗಾರ, ತೃತೀಯ ಶ್ರೀಮತಿ ಪದ್ಮಾ ಕಾಮಗೌಡ ವಿಜೇತರಾದರು.
ಶ್ರೀ ಸನ್ಮತಿ ಮಹಿಳಾ ಮಂಡಳದ ಅಧ್ಯಕ್ಷರಾದ ಶ್ರೀಮತಿ ರೇಷ್ಮಾ ಪಾಟೀಲ ಕಾರ್ಯದರ್ಶಿ ಶ್ರೀಮತಿ ಪ್ರೀತಿ ಉಪಾಧ್ಯೆ, ಉಪಾಧ್ಯಕ್ಷೆ ಶ್ರೀಮತಿ ಅರುಣಾ ಚೌಗಲೆ, ಗೌರವಾಧ್ಯಕ್ಷರಾದ ಶ್ರೀಮತಿ ರತ್ನ ಪಾಟೀಲ ಉಪಸ್ಥಿತರಿದ್ದರು. ಸಾಮುದಾಯಿಕವಾಗಿ ನಮೋಕಾರ ಮಂತ್ರದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.
4 ವರ್ಷದ ಪುಟ್ಟ ಬಾಲಕ ವಿರಾಟ ರತ್ನರಾಜ ಜಯ ಗೌಡ ಭಕ್ತಮರ ಸ್ತೋತ್ರದ 10 ನುಡಿಗಳನ್ನು ಪಠಿಸಿದನು. ಶ್ರೀಮತಿ ಮೇಘನಾ ಭೋಗಾರ ಸ್ವಾಗತ ಗೀತೆ ಹಾಡಿದರು. ಗೌರವಾಧ್ಯಕ್ಷರಾದ ರತ್ನ ಪಾಟೀಲ ಶ್ರೀ ಸನ್ಮತಿ ಮಹಿಳಾ ಮಂಡಲ ನಡೆದು ಬಂದ ದಾರಿ ಸ್ಥಾಪಿಸಲು ಕಾರಣೀಕರ್ತರು ಹಾಗು ಮಾರ್ಗದರ್ಶನ ಮಾಡಿದವರ ಬಗ್ಗೆ ವಿವರಿಸಿದರು ಮತ್ತು ಅವರೆಲ್ಲರಿಗೂ ಕೃತಜ್ಞತೆ ಹೇಳಿದರು.
ಶ್ರೀಮತಿ ಸ್ಮಿತಾ ರಾಮಶೆಟ್ಟಿ ಇವತ್ತಿನ ಪೀಳಿಗೆಗೆ ಧರ್ಮದ ಅರಿವು ಬರಬೇಕು ಲೌಕಿಕ ಶಿಕ್ಷಣದ ಜೊತೆಗೆ ಧಾರ್ಮಿಕ ಶಿಕ್ಷಣವೂ ಕೊಡಿಸಿರಿ ಎಂದು ಉಪದೇಶಿಸಿದರು. ಸ್ವಾಗತ ನೃತ್ಯ, ಪ್ರಾಸ್ತಾವಿಕ ನುಡಿ ಮತ್ತು ನಿರೂಪಣೆ ಶ್ರೀಮತಿ ಪ್ರಜ್ವಲರಾಣಿ ಭೋಗಾರ ಇವರು ನಡೆಸಿಕೊಟ್ಟರು. ಶ್ರೀಮತಿ ಸನ್ಮತಾ ಕಮತೆ ವಂದನಾರ್ಪಣೆ ಮಾಡಿದರು. ಶ್ರೀಮತಿ ರೂಪಾಲಿ ಜನಾಜ ಮತ್ತು ಶ್ರೀಮತಿ ರೇಷ್ಮಾ ಪಾಟೀಲ ಬಹುಮಾನಗಳನ್ನು ಆಯೋಜಿಸಿದರು. ಶ್ರೀಮತಿ ಅರುಣಾ ಚೌಗಲೆ, ಶ್ರೀಮತಿ ರೂಪಾಲಿ ಜನಾಜ ಮತ್ತು ಶ್ರೀಮತಿ ರೇಷ್ಮಾ ಪಾಟೀಲ ಅಲ್ಪೋಪಹಾರದ ವ್ಯವಸ್ಥೆ ಮಾಡಿದರು.
**- ಶ್ರೀಮತಿ ಪ್ರಜ್ವಲರಾಣಿ ಭೋಗಾರ.**