ಧೀಮತಿ ಮಹಿಳಾ ಸಮಾಜ, ಉಜಿರೆ
ಧೀಮತಿ ಮಹಿಳಾ ಸಮಾಜ, ಉಜಿರೆ
ಧೀಮತಿ ಮಹಿಳಾ ಸಮಾಜ, ಉಜಿರೆ
ಜೀವದಯಾಷ್ಟಮಿ ಪ್ರಯುಕ್ತ ಧಾರ್ಮಿಕ ಪ್ರವಾಸದ ವರದಿ
ಜೀವದಯಾಷ್ಟಮಿಯ ಪವಿತ್ರ ಸಂದರ್ಭದಲ್ಲಿ ಧೀಮತಿ ಮಹಿಳಾ ಸಮಾಜ, ಉಜಿರೆ ವತಿಯಿಂದ ಅಕ್ಟೋಬರ್ 19ರಂದು ಆಯೋಜಿಸಲಾದ ಧಾರ್ಮಿಕ ಪ್ರವಾಸದಲ್ಲಿ ಸುಮಾರು 32 ಸದಸ್ಯರು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಕಳದ 18 ಬಸದಿ ಕ್ಷೇತ್ರಗಳು, ಮೂಡುಬಿದಿರೆಯ 18 ಬಸದಿ ಕ್ಷೇತ್ರಗಳು ಹಾಗೂ ಹೊಸಂಗಡಿ, ವೇಣೂರಿನ ಬಸದಿಗಳು ಸೇರಿದಂತೆ ಒಟ್ಟು 45 ಬಸದಿ ದರ್ಶನಗಳನ್ನು ಮಾಡಲಾಯಿತು.
ಈ ಶುಭ ಸಂದರ್ಭದಲ್ಲಿ ಕಾರ್ಕಳ ಮಠದ ಮಠಾಧೀಶರಾದ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು. ಹಾಗೂ ಕಾರ್ಕಳದಲ್ಲಿ ಚಾತುರ್ಮಾಸ ಕೈಗೊಂಡಿರುವ ಪರಮಪೂಜ್ಯ ಏಲಾಚಾರ್ಯ108 ಪ್ರಸಂಗಸಾಗರ ಮುನಿ ಮಹಾರಾಜ ರನ್ನು ಭೇಟಿಯಾಗಿ, ಆಶೀರ್ವಾದ ಪಡೆದು ನಮ್ಮ ಮಹಿಳಾ ಸಮಾಜದ ವತಿಯಿಂದ ಒಂದು ದಿನದ ಆಹಾರ ದಾನದ ವ್ಯವಸ್ಥೆಗಾಗಿ ದೇಣಿಗೆ ನೀಡಲಾಯಿತು.
ನಂತರ ಮೂಡುಬಿದಿರೆಯ ಜಿನ ಮಂದಿರಗಳ ದರ್ಶನದ ಶುಭ ಅವಸರದಲ್ಲಿ ಅಲ್ಲಿನ ಮಠಾಧೀಶರಾದ ಪರಮಪೂಜ್ಯ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಯಿತು.
ಭಕ್ತಿ, ಧಾರ್ಮಿಕ ಶ್ರದ್ಧೆ ಹಾಗೂ ಸೇವಾಭಾವದಿಂದ ಕೂಡಿದ ಈ ಪ್ರವಾಸವು ಎಲ್ಲ ಸದಸ್ಯರಿಗೂ ಆತ್ಮತೃಪ್ತಿ ಮತ್ತು ಆಧ್ಯಾತ್ಮಿಕ ಅನುಭವವನ್ನು ನೀಡಿತು. ಎಲ್ಲರ ಸಹಕಾರದಿಂದ ಪ್ರವಾಸವು ಯಶಸ್ವಿಯಾಗಿ ನೆರವೇರಿತು.
ಜೈ ಜಿನೇಂದ್ರ 🙏