ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು.

ಬ್ರಾಹ್ಮೀ ಜೈನ ಮಹಿಳಾ ಸಮಾಜ, ವೇಣೂರು.

prayer thumb
ದಿನಾಂಕ 27.02.2026ನೇ ಶುಕ್ರವಾರ ಆಚಾಯ೯ ಶ್ರೀ 108 ಅನೇಕಾಂತ ಸಾಗರ್‌ ಮುನಿಮಹಾರಾಜ್‌ ಸಂಘದ ತ್ಯಾಗಿವೃಂದ ಹಾಗೂ ಎರಡು ಮಾತಾಜಿಯವರ ವೇಣೂರು ಪುರಪ್ರವೇಶ ಕಾಯ೯ಕ್ರಮದಲ್ಲಿ ನಮ್ಮ ಸಂಘದ ಸದಸ್ಯರು ಎದುರುಗೊಂಡರು. ಹಾಗೂ ಅನೇಕಾಂತ್‌ ಮುನಿಮಹಾರಾಜರ 27ನೇ ವಷ೯ದ ದೀಕ್ಷಾಕಲ್ಯಾಣ ದಿನವಾದುದರಿಂದ ಕಲ್ಲು ಬಸದಿಯಲ್ಲಿ  ದೇವರಿಗೆ ಕ್ಷೀರಾಭಿಷೇಕ  ಹಾಗೂ  ಮುನಿಗಳ ಪಾದ ಪೂಜೆ ಮತ್ತು ಆರತಿ ಕಾಯ೯ಕ್ರಮ ನಡೆಯಿತು.ಅದೇ ದಿನ ಸಾಯಂಕಾಲ  27 ವಿಧದ ಅಷ್ಟದ್ರವ್ಯಗಳನ್ನು ತಯಾರಿಸಿ ಮುನಿಗಳಿಗೆ ಅಘ್ಯ೯ ಎತ್ತಲಾಯಿತು. ಈ ಕಾಯ೯ಕ್ರಮದಲ್ಲಿ ನಮ್ಮ ಸಂಘದ ಸದಸ್ಯರು ಭಾಗವಹಿಸಿ ಮುನಿಶ್ರೀಗಳ   ಆಶೀವ೯ಚನ ಪಡೆದರು..