ಶಾರದಾ ಮಹಿಳಾ ಪರಿಷತ್ ಬೆಳಗಾವಿಯ ಪದಗ್ರಹಣ ಕಾಯ೯ಕ್ರಮ

ಶಾರದಾ ಮಹಿಳಾ ಪರಿಷತ್ ಬೆಳಗಾವಿಯ ಪದಗ್ರಹಣ ಕಾಯ೯ಕ್ರಮ

prayer thumb
ಶಾರದಾ ಮಹಿಳಾ ಪರಿಷತ್ ಬೆಳಗಾವಿಯ ಪದಗ್ರಹಣ ಕಾಯ೯ಕ್ರಮ ದ. 18.08.26ರಂದು ಅತ್ಯಂತ ವಿಜ್ರಂಭಣೆಯಿಂದ ಜರುಗಿತು. ಅತಿಥಿಯಾಗಿ ದ ಭಾ ಜೈ ಸ ಮಾ ದಿ ಜೈನ ಬೋಡಿ೯ಂಗನ ಅಧ್ಯಕ್ಷರಾದ ಶ್ರೀ ಪುಷ್ಪಕ ಹಣಮನ್ನವರ ಆಗಮಿಸಿದ್ದರು. ಎಲ್ಲರೂ ಒಟ್ಟುಗೂಡಿ ಕೆಲಸ ಮಾಡಲು ಪ್ರೇರೇಪಿಸಿ ತಾವು ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಅಶ್ವಿನಿ ನೀಡಿದರು. 
ನೀನು ಅಧ್ಯಕ್ಷರಾದ ಡಾ. ಭಾರತಿ ಸವದತ್ತಿಯವರಿಗೆ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀಮತಿ ವೈಶಾಲಿ ಅಂಕಲೆಯವರು ಅ ಕ ಮ ಒಕ್ಕೂಟದ ಕಾಲರ ಹಾಕಿ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ  ಮಂಗಲ ಕುಸನಾಳೆ, ಕಾಯ೯ದಶಿ೯ ವೀಣಾ ಕುಂದೂರ, ಸಹ ಕಾಯ೯ದಶಿ೯ರೇಖಾ ಪಾಟೀಲ, ಖಜಾಂಚಿ ಭಾರತಿ ಪಾಟೀಲ, ಸಹ ಖಜಾಂಚಿ ಛಾಯ ಪಾಟೀಲ ಅಧಿಕಾರ ಸ್ವೀಕರಿಸಿದರು. 
ಈ ಸಂದರ್ಭದಲ್ಲಿ ಹಿಂದಿನ ಪದಾಧಿಕಾರಿಗಳಾದ ವೈಶಾಲಿ ಅಂಕಲೆ,ರತ್ನಾ ಪಾಟೀಲ, ಇಂದಿರ ಶಂಕರಗೌಡ ಇವರನ್ನು ಸತ್ಕರಿಸಲಾಯಿತು. ಬೆಳಗಾವಿಯ ಎಲ್ಲಾ ಮ ಮಂ.ಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಸೇರಿ ಸು. 120ಜನ ಕಾಯ೯ಕ್ರಮದಲ್ಲಿ ಭಾಗವಹಿಸಿದ್ದರು. 
ನೂತನ ಅಧ್ಯಕ್ಷರಾದ ಭಾರತಿ ಸವದತ್ತಿಯವರು. ಇಂದಿನ ಜ್ವಲಂತ ಸಮಸ್ಯೆಗಳನ್ನು ವಿವರಿಸಿ ಆರೋಗ್ಯ, ಸಂಸ್ಕಾರ, ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಎಲ್ಲರೂ ಒಂದಾಗಿ ಮುಂದೆ ಸಾಗೋಣವೆಂದು ಹೇಳಿದರ. ಈ ಸಂದರ್ಭದಲ್ಲಿ ವೈಶಾಲಿ ಅಂಕಲೆ,ಪದ್ಮಜಾ ಪಾಟೀಲ,ಭಾರತಿ ರಾಮಗೌಂಡ, ರೂಪಾಲಿ ಜನಾಜ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ಸಭೆಯಲ್ಲಿ ತುಂಬಾ ಜನರ ಅನುಮೋದನೆ ದೊರೆಯಿತು. ವೀಣಾ ಕುಂದೂರ ಸ್ವಾಗತಿಸಿದರು, ಭಾರತಿ ಪಾಟೀಲ ವಂದಿಸಿದರು. ಶೋಭಾ ಪಾಟೀಲ ಕಾಯ೯ಕ್ರಮನಿರೂಪಿಸಿದರು