ಆತ್ಮೀಯರಾದ ಶ್ರೀಮತಿ ಪದ್ಮಪ್ರಕಾಶ್ ರವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಪದಗ್ರಹಣವನ್ನು ಹೊಂದಿದ ಸುಂದರ ದಿನ
ಆತ್ಮೀಯರಾದ ಶ್ರೀಮತಿ ಪದ್ಮಪ್ರಕಾಶ್ ರವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಪದಗ್ರಹಣವನ್ನು ಹೊಂದಿದ ಸುಂದರ ದಿನ
ಸರ್ವರಿಗೂ ಜೈಜಿನೇಂದ್ರ 🌺🙏
ಶುಭದಿನ💐
ತಮ್ಮೆಲ್ಲರ ಗಮನಕ್ಕೆ🙏
ಮಾನ್ಯರೇ
2024 ರ,ಸೆಪ್ಟೆಂಬರ್ 29ರ, ಭಾನುವಾರ ದಾವಣಗೆರೆಯ ದಿಗಂಬರ ಜೈನ ಸಮಾಜ ಹಾಗೂ ಪದ್ಮಾಂಬ ಮಹಿಳಾ ಸಮಾಜದ ಎಲ್ಲರಿಗೂ ಅತ್ಯಂತ ಸಂಭ್ರಮದ ದಿನ. ಆ ದಿನ ನಮ್ಮೆಲ್ಲರ ಆತ್ಮೀಯರಾದ ಶ್ರೀಮತಿ ಪದ್ಮಪ್ರಕಾಶ್ ರವರು ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾಗಿ ಪದಗ್ರಹಣವನ್ನು ಹೊಂದಿದ ಸುಂದರ ದಿನ.
ಎರಡು ಸಂವತ್ಸರಗಳು ಆಗಿಯೇ ಬಿಟ್ಟಿತು. ಅತ್ಯಂತ ವೇಗವಾಗಿ ದಿನಗಳು ಉರುಳಿದವು . ಎರಡು ವರ್ಷಗಳು ಕಳೆದುದು ಗೊತ್ತಾಗಲೇ ಇಲ್ಲ.
ಈ ಎರಡು ವರ್ಷಗಳನ್ನು ಸದುಪಯೋಗ ಗೊಳಿಸಿದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್, ಉಪಾಧ್ಯಕ್ಷರು ಗಳಾದ ಶ್ರೀಮತಿ ಡಾ. ನೀರಜಾ ನಾಗೇಂದ್ರಕುಮಾರ್, ಶ್ರೀಮತಿ ಚಂದ್ರಕಲಾ ಸೊಲ್ಲಪುರ್, ಕಾರ್ಯದರ್ಶಿ ಶ್ರೀಮತಿ ಹರ್ಷ ನಾಗರಾಜ್, ಸಹ ಕಾರ್ಯದರ್ಶಿ ಶ್ರೀಮತಿ ಕವಿತಾ ಧರಣೇಂದ್ರ ಪ್ರಸಾದ್, ಖಜಾಂಚಿ ಶ್ರೀಮತಿ ರೂಪ ಸಂಜಯ್ ಹಜಾರೆ... ಯವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸಪ್ರೇಮ ಜೈಜಿನೇಂದ್ರಗಳು.🥰🙏
ಎರಡನೆಯ ವರ್ಷದಲ್ಲಿ ಒಕ್ಕೂಟ ನಡೆದು ಬಂದ ಹಾದಿಯ ಮೈಲಿಗಲ್ಲುಗಳು ಈ ರೀತಿ ಇವೆ.
1)"ಒಗ್ಗಟ್ಟಿನಲ್ಲಿ ಬಲವಿದೆ" ಎನ್ನುವ ಮಂತ್ರಕ್ಕೆ ಸಾಕ್ಷಿಯಾಯಿತು, "ಸಕ್ಕರೆ ನಗರ"ಮಂಡ್ಯದಲ್ಲಿ,ದಿನಾಂಕ 21-12-2025 ರಂದು ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ತೃತೀಯ ಸಭೆ💐🙏
ಪರಿಸರ ಸಂರಕ್ಷಣೆ, ಅರೋಗ್ಯ,ಸಾಂಸ್ಕೃತಿಕ,ಅಲ್ಪಸಂಖ್ಯಾತ ಆಯೋಗದ ಬಗ್ಗೆ ಮಾಹಿತಿ, ಸ್ವಚ್ಛ ಭಾರತ್ ಆಂದೋಲನದ ಬಗ್ಗೆ ಮಾಹಿತಿ,ಮಹಿಳಾ ಸಾಹಿತ್ಯದ ಬಗ್ಗೆ ಮಾಹಿತಿ ಹೀಗೆ ಹತ್ತು ಹಲವಾರು ವಿಶೇಷ ವಿಷಯಗಳ ಬಗ್ಗೆ ಅರಿವು ಮೂಡಿಸಿತು ಈ ಅದ್ಭುತ ಕಾರ್ಯಕ್ರಮ👍
ಮನಮೋಹಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಶುಚಿ ರುಚಿಯಾದ ಆಹಾರದ ವ್ಯವಸ್ಥೆ, ಸಭಾಂಗಣದ ಸುಂದರ ಅಲಂಕಾರ.. ಮಹಿಳಾ ಸಮಾಜ ಹಾಗೂ ಮಂಡ್ಯ ನಗರ ಜೈನ ಸಮಾಜದವರ ಅಭಿರುಚಿಯನ್ನು ಸಾರಿ ಸಾರಿ ಹೇಳಿದವು.
ಮಂಡ್ಯದ ಶ್ರೀ ಅನಂತನಾಥ ಜೈನ ಸಮಾಜ, ಶ್ರೀ ಜ್ವಾಲಾಮಾಲಿನಿ ಮಹಿಳಾ ಸಮಾಜ, ಯುವಮಂಡಳಿ ಇವರೆಲ್ಲರಿಗೂ ನಮ್ಮ ಒಕ್ಕೂಟದ ವತಿಯಿಂದ ಹೃತ್ಪೂರ್ವಕ ಧನ್ಯವಾದಗಳು & ಸಪ್ರೇಮ ಜೈಜಿನೇಂದ್ರಗಳು 🙏🙏🙏
ಶ್ರೀ ಜ್ವಾಲಮಾಲಿನಿ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ಪೂರ್ಣಿಮಾ ಗೊಮ್ಮಟೇಶ್, ಕಾರ್ಯದರ್ಶಿ ಶ್ರೀಮತಿ ಕುಸುಮ ಶಯನ್, ಎಲ್ಲಾ ಪದಾಧಿಕಾರಿಗಳು, ಸದಸ್ಯೆಯರು
ಮಂಡ್ಯ ನಿರ್ದೇಶಕರಾದ ಶ್ರೀಮತಿ ಪದ್ಮಶ್ರೀ ಶಾಂತಿಪ್ರಸಾದ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು & ಸಪ್ರೇಮ ಜೈಜಿನೇಂದ್ರಗಳು 🙏🙏
2) ದಿನಾಂಕ 14-06-2026 ರ ಭಾನುವಾರದಂದು, ಹಾಸನದ, ಬಾಹುಬಲಿ ಭವನದಲ್ಲಿ, ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಜೈನ ಮಹಿಳಾ ಒಕ್ಕೂಟದ ನಾಲ್ಕನೇ ವಲಯ ಮಟ್ಟದ ಸಭೆ ನಿಜಕ್ಕೂ ಅವಿಸ್ಮರಣೀಯ❤️🙏
ಹಾಸನದ ಶ್ರೀ ಕಾಳಲಾದೇವಿ ಜೈನ ಮಹಿಳಾ ಸಮಾಜ, ಶ್ರವಣಬೆಳಗೊಳದ ಶ್ರೀ ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಹಾಗೂ ಚನ್ನರಾಯಪಟ್ಟಣದ ಶ್ರೀ ಜ್ವಾಲಾಮಾಲಿನಿ ಜೈನ ಮಹಿಳಾ ಸಮಾಜಗಳು ಕಾರ್ಯಕ್ರಮದ ಅತಿಥ್ಯವನ್ನು ವಹಿಸಿದ್ದರು💐🙏
ಹಾಸನದ ಶ್ರೀಮತಿ ಸುಪ್ರಭಾ ಅಭಿನಂದನ್ ಅವರು ಸಮಾರಂಭದ ಮುಖ್ಯ ರೂವಾರಿಗಳು ಹಾಗೂ ನೇತೃತ್ವವನ್ನು ವಹಿಸಿದ್ದರು. ಶ್ರವಣಬೆಳಗೊಳದ ಶ್ರೀಮತಿ ಮಹಾಲಕ್ಷ್ಮಿಯವರು, ಚನ್ನರಾಯಪಟ್ಟಣದ ಶ್ರೀಮತಿ ಯಶೋದಾ ಜೈನ್ ಅವರು ಕೈಜೋಡಿಸಿ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದರು. ಅವರೆಲ್ಲರಿಗೂ ಸಪ್ರೇಮ ಜೈಜಿನೇಂದ್ರಗಳು 🙏🙏🙏
3) ಅಖಿಲ ಕರ್ನಾಟಕ ಜೈನ ಮಹಿಳಾ ಸಮಾವೇಶವನ್ನು.
ಪರಮಪೂಜ್ಯ ಮುನಿಶ್ರೀ 108 ವಿದಿತ ಸಾಗರ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ,ಶುಭಸ್ಥಾನ ಹಾವೇರಿ ನಗರದಲ್ಲಿ, *ಬೃಹತ್ ಸಿದ್ಧಚಕ್ರ ಮಹಾಮಂಡಲ ಮಹೋತ್ಸವದ ಸಂದರ್ಭದಲ್ಲಿ (ದಿನಾಂಕ: 12-12-2025 ರಿಂದ ದಿನಾಂಕ:20-12-2025 ರ ವರೆಗೆ) ಹಮ್ಮಿಕೊಳ್ಳಲಾಗಿತ್ತು.ಈ ಸಮಾವೇಶಕ್ಕೆ, ಒಕ್ಕೂಟದ ಸಮಸ್ತ ಮಹಿಳಾ ಸಮಾಜದ ಪದಾಧಿಕಾರಿಗಳು & ಸದಸ್ಯೆಯರು, ಒಕ್ಕೂಟದ ಸಮಸ್ತ ನಿರ್ದೇಶಕರು ಆಗಮಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ವಿವರ :-
ಅಧ್ಯಕ್ಷತೆ :-
ಶ್ರೀಮತಿ ಪದ್ಮಾ ಪ್ರಕಾಶ್
ಅಧ್ಯಕ್ಷರು, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ.
ಉಪನ್ಯಾಸಕಾರರು :-
1) ಶ್ರೀಮತಿ ಡಾ. ನೀರಜಾ ನಾಗೇಂದ್ರಕುಮಾರ್
ಉಪಾಧ್ಯಕ್ಷರು, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟ.
ವಿಷಯ :- ಪ್ರಸಕ್ತ ಸಾಮಾಜಿಕ ಅಭಿವೃದ್ಧಿಯಲ್ಲಿ ಜೈನ ಮಹಿಳೆಯರ ಪಾತ್ರ .
2) ಶ್ರೀಮತಿ ಡಾ. C. P. ಕುಸುಮ
ನಿವೃತ್ತ ಪ್ರಾಕೃತ ಪ್ರಾಧ್ಯಾಪಕರು
ಬಾಹುಬಲಿ ಪ್ರಾಕೃತ ವಿದ್ಯಾಪೀಠ
ಶ್ರವಣಬೆಳಗೊಳ
ವಿಷಯ :- ಜೈನ ನೋಂಪಿಗಳ ವಿಧಿ ವಿಧಾನ ಮತ್ತು ಮಹತ್ವ.
4) ಈ ಪ್ರಸಕ್ತ ವರ್ಷದಲ್ಲಿ....
ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದಲ್ಲಿ ಸೇರ್ಪಡೆಯಾಗಿರುವ ಎಲ್ಲಾ ಮಹಿಳಾ ಸಮಾಜಗಳಿಗೆ,
a)ಭಗವಾನ್ ಮಹಾವೀರರ ಜನ್ಮಜಯಂತಿಯ ಅಂಗವಾಗಿ, ಮಹಾವೀರರ ಬಗ್ಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
b)ಸ್ವಾತಂತ್ರೋತ್ಸವದ ಪ್ರಯುಕ್ತ, ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
c)ಬೀದಿಯಲ್ಲಿ ಕುಳಿತು ಮಾರುವ ವ್ಯಾಪಾರಿಗಳಿಗೆ,ಛತ್ರಿಗಳನ್ನು ನೀಡುವ ಚಟುವಟಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
d)ಬೇಸಿಗೆಯಲ್ಲಿ ಪಶು, ಪಕ್ಷಿಗಳಿಗೆ ನೀರು ನೀಡುವ ಚಟುವಟಿಕೆಯನ್ನು ನೀಡಲಾಗಿತ್ತು.
e)ಕೋಲಾಟದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
f) ಐವರು ವಿದ್ಯಾರ್ಥಿನಿಯರಿಗೆ, ವಿದ್ಯಾರ್ಥಿ ವೇತನವನ್ನು ನೀಡಲಾಯಿತು.
5) ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಪ್ರಕಾಶ್ ಅವರು ಅನೇಕ ಕಾರ್ಯಕ್ರಮಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿದರು
a)ಹಾರಿಗೆಯಲ್ಲಿ ನಡೆದ ಜೈನ ಜಾನಪದ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
b)ದಾವಣಗೆರೆಯಲ್ಲಿ ಜಿನ ಸಹಸ್ರನಾಮ ಕಾರ್ಯಕ್ರಮವನ್ನು, ಆಯೋಜಿಸಿ, ಯಶಸ್ವಿಗೊಳಿಸಿದರು. ಬೆಂಗಳೂರಿನ ಕಾರ್ಯಕ್ರಮದಲ್ಲೂ ಭಾಗವಹಿಸಿದರು.
c)ಮಂಗಳೂರಿನ ಪಿಲಿಕುಳಿ ಯಲ್ಲಿ ನಡೆದ ಜಿನಭಜನೆಯ ಫೈನಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
d) ನಂದಿಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಿರಿಭೂವಲಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
e)ಗುಡಿಗೇರಿ ಪಂಚಕಲ್ಯಾಣದಲ್ಲಿ ಭಾಗವಹಿಸಿದ್ದರು.
f)ಬೆಂಗಳೂರಿನ ಚಿಕ್ಕಪೇಟೆಯಲ್ಲಿ ನಡೆದ ಶೃತಪಂಚಮಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
g)ಶ್ರವಣಬೆಳಗೊಳದ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ, ದಾವಣಗೆರೆಯ ಪ್ರವೇಶದ,ಆದ್ದೂರಿ ಕಾರ್ಯಕ್ರಮದಲ್ಲೂ ಭಾಗವಹಿಸಿದ್ದರು.
ವಿಶೇಷವಾಗಿ,ಪ್ರಸಕ್ತ ವರ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ,ಅನೇಕ ಮಹಿಳಾ ಸಮಾಜಗಳು ಹಾಗೂ ಮಹಿಳಾ ಸಮಾಜಗಳ ಸದಸ್ಯೆಯರು, ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟಕ್ಕೆ ಸೇರ್ಪಡೆಯಾದರು.👍🙏
ಹೀಗೆ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟವು ಮಾತೃಶ್ರೀ ಡಾ. ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ,ಶ್ರೀಮತಿ ಅನಿತಾ ಸುರೇಂದ್ರ ಕುಮಾರ್ ಅವರ ಸಹಯೋಗದಲ್ಲಿ,ಶ್ರೀಮತಿ ಪದ್ಮಪ್ರಕಾಶ್ ಅವರ ನಾಯಕತ್ವದಲ್ಲಿ ಎರಡು ಸಂವತ್ಸರಗಳನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಿದೆ.🙏
ಇನ್ನು ಮುಂಬರುವ ದಿನಗಳಲ್ಲೂ ಸಹ ತಮ್ಮೆಲ್ಲರ ಪ್ರೀತಿ, ವಿಶ್ವಾಸ, ಸಹಕಾರ ನಮ್ಮೊಂದಿಗಿರಲೆಂದು ಆಶಿಸುತ್ತೇವೆ.🙏🙏
ಧನ್ಯವಾದಗಳು. 🙏🌺🙏