ಇಂದು ದಾವಣಗೆರೆ ಯ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಎಲ್ಲಾ ಸದಸ್ಯರು ದತ್ತು ಕೇಂದ್ರಕ್ಕೆ ಭೇಟಿ ನೀಡಿದೇವು

ಇಂದು ದಾವಣಗೆರೆ ಯ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಎಲ್ಲಾ ಸದಸ್ಯರು ದತ್ತು ಕೇಂದ್ರಕ್ಕೆ ಭೇಟಿ ನೀಡಿದೇವು

🙏🏻🙏🏻ಎಲ್ಲರಿಗೂ ಜೈ ಜಿನೇಂದ್ರ 🙏🏻🙏🏻
ಇಂದು ದಾವಣಗೆರೆ ಯ ಪದ್ಮಾಂಬ ಮಹಿಳಾ ಸಮಾಜದ ವತಿಯಿಂದ ಎಲ್ಲಾ ಸದಸ್ಯರು ದತ್ತು ಕೇಂದ್ರಕ್ಕೆ ಭೇಟಿ ನೀಡಿದೇವು ಅಲ್ಲಿನ  ಹತ್ತು ದಿನದ ಹಸುಗೂಸಿನಿಂದ ಹಿಡಿದು 6 ವರ್ಷದ ಮಕ್ಕಳ ಮುದ್ದಾದ ನಗು ಮುಗ್ಧತೆ ನೋಡಿ ನಾವು ಅವರ ಪ್ರಪಂಚದಲ್ಲೇ ಕಳೆದು ಹೋದೆವು 
 ಮಕ್ಕಳಿಗೆ ಅಗತ್ಯವಿರುವ ಟಾವೆಲ್ಸ್ ಸ್ವೆಟರ್ಸ್ ಹಾಗೆ ಹಣ್ಣು ಹಂಪಲು ಬಿಸ್ಕೆಟ್ ಎಲ್ಲವನ್ನು ಕೊಟ್ಟು ನಮ್ಮ ಅಳಿಲು ಸೇವೆ ಸಲ್ಲಿಸಿದೆವು 
ಈ ಕಾರ್ಯಕ್ರಮ ದಲ್ಲಿ ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಪ್ರಕಾಶ್, ಖಜಾಂಚಿಯಾದ ರೂಪ ಹಜಾರೆ, ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರಾದ ಶ್ರೀಮತಿ ವರ್ಷಾ ಸುಧೀರ್ ಹಾಗೂ ಸಂಸ್ಥಾಪಕರಾದ ಉಷಾ ಜಯಪ್ರಕಾಶ್ ಕಾರ್ಯದರ್ಶಿಯಾದಂತ ಸುಹಾಸಿನಿ ದೀಪಕ್, ಖಜಾಂಚಿಯಾದ ಚೇತನಾ ಪದ್ಮರಾಜ್ ಉಪಸ್ಥಿತರಿದ್ದರು
 ಈ ಕಾರ್ಯಕ್ರಮ ತುಂಬಾ ಅರ್ಥಪೂರ್ಣ ಹಾಗೂ  ಸಾರ್ಥಕತೆಯ ಒಂದು ಭಾವವನ್ನು ತಂದುಕೊಟ್ಟಿದೆ 🙏🏻🙏🏻 ದತ್ತು ಕೇಂದ್ರಕ್ಕೆ ಹೋಗಲು ವಾಹನದ ವ್ಯವಸ್ಥೆಯನ್ನು  ಡಾ.ಲೀಲಾವತಿ ಅವರು ಮಾಡಿಕೊಟ್ಟಿದ್ದರು ಅವರಿಗೂ ಕೂಡ ತುಂಬು ಹೃದಯದ ವಂದನೆಗಳು 🙏🏻🙏🏻

 ಪದ್ಮಾಂಬ ಮಹಿಳಾ ಸಮಾಜದ ಅಧ್ಯಕ್ಷರು 
ವರ್ಷಾ ಸುಧೀರ್ 
ದಾವಣಗೆರೆ