ದಿನಾಂಕ 14-06-2026 ರ ಭಾನುವಾರದಂದು, ಹಾಸನದ, ಬಾಹುಬಲಿ ಭವನದಲ್ಲಿ, ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಜೈನ ಮಹಿಳಾ ಒಕ್ಕೂಟದ ನಾಲ್ಕನೇ ವಲಯ ಮಟ್ಟದ ಸಭೆ
ದಿನಾಂಕ 14-06-2026 ರ ಭಾನುವಾರದಂದು, ಹಾಸನದ, ಬಾಹುಬಲಿ ಭವನದಲ್ಲಿ, ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಜೈನ ಮಹಿಳಾ ಒಕ್ಕೂಟದ ನಾಲ್ಕನೇ ವಲಯ ಮಟ್ಟದ ಸಭೆ
ಸರ್ವರಿಗೂ ಜೈಜಿನೇಂದ್ರ🌺🙏
ಶುಭದಿನ 🙏🌺
ದಿನಾಂಕ 14-06-2026 ರ ಭಾನುವಾರದಂದು, ಹಾಸನದ, ಬಾಹುಬಲಿ ಭವನದಲ್ಲಿ, ಹಮ್ಮಿಕೊಂಡಿದ್ದ ಅಖಿಲ ಕರ್ನಾಟಕ ಜೈನ ಜೈನ ಮಹಿಳಾ ಒಕ್ಕೂಟದ ನಾಲ್ಕನೇ ವಲಯ ಮಟ್ಟದ ಸಭೆ ನಿಜಕ್ಕೂ ಅವಿಸ್ಮರಣೀಯ❤️🙏
ಹಾಸನದ ಶ್ರೀ ಕಾಳಲಾದೇವಿ ಜೈನ ಮಹಿಳಾ ಸಮಾಜ, ಶ್ರವಣಬೆಳಗೊಳದ ಶ್ರೀ ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಹಾಗೂ ಚನ್ನರಾಯಪಟ್ಟಣದ ಶ್ರೀ ಜ್ವಾಲಾಮಾಲಿನಿ ಜೈನ ಮಹಿಳಾ ಸಮಾಜಗಳು ಕಾರ್ಯಕ್ರಮದ ಅತಿಥ್ಯವನ್ನು ವಹಿಸಿದ್ದರು💐🙏
ಹಾಸನದ ಶ್ರೀಮತಿ ಸುಪ್ರಭಾ ಅಭಿನಂದನ್ ಅವರು ಸಮಾರಂಭದ ಮುಖ್ಯ ರೂವಾರಿಗಳು ಹಾಗೂ ನೇತೃತ್ವವನ್ನು ವಹಿಸಿದ್ದರು. ಶ್ರವಣಬೆಳಗೊಳದ ಶ್ರೀಮತಿ ಮಹಾಲಕ್ಷ್ಮಿಯವರು, ಚನ್ನರಾಯಪಟ್ಟಣದ ಶ್ರೀಮತಿ ಯಶೋದಾ ಜೈನ್ ಅವರು ಕೈಜೋಡಿಸಿ ಕಾರ್ಯಕ್ರಮದ ಅಭೂತಪೂರ್ವ ಯಶಸ್ಸಿಗೆ ಕಾರಣರಾದರು. ಅವರೆಲ್ಲರಿಗೂ ಸಪ್ರೇಮ ಜೈಜಿನೇಂದ್ರಗಳು 🙏🙏🙏
ಬೆಳಿಗ್ಗೆ 10 ಗಂಟೆಗ ಸುಶ್ರಾವ್ಯ ವಾದ ಮಂಗಲಾ ಚರಣೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು, ಒಕ್ಕೂಟದ ಗೀತೆಯನ್ನು ಕಾಳಲಾದೇವಿ ಮಹಿಳಾ ಸಮಾಜದವರು ಮಧುರ ವಾಗಿ ಹಾಡಿದರು, ಶ್ರೀಮತಿ ಸುಪ್ರಭಾ ಅಭಿನಂದನ್ ಅವರು ಎಲ್ಲರಿಗೂ ಆತ್ಮೀಯವಾಗಿ ಸ್ವಾಗತ ಕೋರಿದರು. ದೀಪ ಪ್ರಜ್ವಲನೆ ಯೊಂದಿಗೆ ಕಾರ್ಯಕ್ರಮ ಚಾಲನೆಯಾಯಿತು. ಶ್ರೀಮತಿ ಹರ್ಷ ನಾಗರಾಜ್ ಅವರು ಸಮಾರಂಭದ ಪ್ರಾಸ್ತಾವಿಕ ನುಡಿಗಳಲ್ಲಿ, ಇದುವರಿಗೂ ಒಕ್ಕೂಟವು ನಡೆದು ಬಂದ ಹಾದಿ ಹಾಗೂ ಪ್ರಸಕ್ತ ಸಾಲಿನ ಒಕ್ಕೂಟದ ಕಾರ್ಯವೈಖರಿಗಳನ್ನು ತಿಳಿಸಿದರು. ಶ್ರೀಮತಿ ಭಾರತಿ ಸವದತ್ತಿಯವರು ಭಾರತೀಯ ಆಡಳಿತಾತ್ಮಕ ಸೇವೆಗಳಾದ IAS, IFS, IPS ಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಶ್ರೀಮತಿ ತ್ರಿಶಲ ಬ್ರಹ್ಮಯ್ಯ ಅವರು ಪ್ರಬಂಧ ಸ್ಪರ್ಧೆಯ ತೀರ್ಪುಗಾರರಾಗಿದ್ದು, ಸ್ಪರ್ಧೆಯ ಬಗ್ಗೆ ಹಾಗೂ ಜೈನ ಸಂಸ್ಕಾರದ ಬಗ್ಗೆ ತಿಳಿಸಿದರು.ಬಹುಮಾನ ವಿತರಣಾ ಕಾರ್ಯವನ್ನು ಶ್ರೀಮತಿ ರೂಪಾ ಹಜಾರೆ ಯವರು ನಡೆದಸಿಕೊಟ್ಟರು. ಪ್ರಬಂಧ ಹಾಗೂ ಛಾಯಾಚಿತ್ರ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 👍ಈ ವಲಯಕ್ಕೆ ಸೇರಿದ ಮಹಿಳಾ ಸಮಾಜಗಳ ವರದಿಯನ್ನು ಆಯಾಯ ವಲಯದ ಕಾರ್ಯದರ್ಶಿಯವರು ನಡೆಸಿಕೊಟ್ಟರು.ಸುಂದರವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಕ್ಕಳು ನಡೆಸಿಕೊಟ್ಟರು.ಗಿಡಗಳಿಗೆ ನೀರುಣಿಸಿ
ಪರಿಸರದಿನವನ್ನು ಆಚರಿಸಲಾಯಿತು.🥰 ಸುಂದರವಾಗಿ ಅಲಂಕರಿಸಲ್ಪಟ್ಟ ಸಭಾಂಗಣ ಶ್ರೀ ಕಾಳಲಾದೇವಿ ಮಹಿಳಾ ಸಮಾಜದ ಸದಸ್ಯೆಯರು ಕಲಾ ಕೌಶಲ್ಯವನ್ನು ಮನದಟ್ಟು ಮಾಡಿದವು ಹಾಗೂ ಎಲ್ಲರ ಮನ ಸೆಳೆದವು ❤️. ರುಚಿ, ಶುಚಿಯಾದ, ವೈವಿಧ್ಯಮಯ ಭೋಜನ ಆಗಮಿಸಿದ್ದ ಎಲ್ಲರ ಹೊಟ್ಟೆ ತುಂಬಿಸಿದವು.
"ಅನ್ನದಾತೋ ಸುಖೀಭವ"🙏🙏
ಈ ಕಾರ್ಯಕ್ರಮಕ್ಕೆ ನಿಕಟಪೂರ್ವ ಅಧ್ಯಕ್ಷರಾದ ಶ್ರೀಮತಿ ಕೇಸರಿ ರತ್ನರಾಜಯ್ಯ ಅವರ ಸನ್ಮಾನ, ಮೆರುಗು ನೀಡಿತು.ಶ್ರೀಮತಿ ಚಂದ್ರಕಲಾ ಸೊಲ್ಲಪುರೆ,ಶ್ರೀಮತಿ ಶೀಲಾ ಅನಂತರಾಜ್, ಶ್ರೀಮತಿ ನವರತ್ನ ಇಂದುಕುಮಾರ್, ಶ್ರೀಮತಿ ಪುಷ್ಪ ಪಾಟೀಲ್ ಹಾಗೂ ಇನ್ನೂ ಅನೇಕರು ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಪದ್ಮಾ ಪ್ರಕಾಶ್ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ,ನಿರ್ದೇಶಕರು ಹಾಗೂ ಮಹಿಳಾ ಸಮಾಜದವರು ಹೆಚ್ಚಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು. ಒಕ್ಕೂಟವು ಪ್ರಾರಂಭವಾಗಿ 27 ವರ್ಷಗಳಾಯಿತು. ಕರ್ನಾಟಕದ ಎಲ್ಲಾ ಮಹಿಳಾ ಸಮಾಜಗಳು ಜನವರಿ 29 ನೇ ತಾರೀಖಿನಂದು ( ಒಕ್ಕೂಟ ಪ್ರಥಮವಾಗಿ ಅನುಷ್ಠಾನಗೊಂಡಿದ್ದು )
"ಒಕ್ಕೂಟದ ದಿನ" ವಾಗಿ ಆಚರಿಸಬೇಕೆಂದು ಕರೆ ನೀಡಿದರು. ಆ ದಿನ ಕರ್ನಾಟಕದ ಸರ್ವ ಮಹಿಳಾ ಸಮಾಜಗಳು ತಂತಮ್ಮ ಸ್ಥಳಗಳಲ್ಲಿ ಯಾವುದಾದರೂಂದು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು 🙏
ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀಮತಿ ಕವಿತಾ ಧರಣೇಂದ್ರ ಪ್ರಸಾದ್ ನಿರ್ವಹಿಸಿದರು.
ಶ್ರೀಮತಿ ಕಲ್ಪನಾ ದೇವೇಂದ್ರ ಅವರು ಅಚ್ಚುಕಟ್ಟಾಗಿ, ಸುಂದರವಾಗಿ ಕಾರ್ಯಕ್ರಮವನ್ನು ನಿರೂಪಿಸಿದರು.
ಹಿಂದೆಂದಿಗಿಂತಲೂ ಈ ಕಾರ್ಯಕ್ರಮದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ವಲಯ ನಿರ್ದೇಶಕರು, ಈ ವಲಯಕ್ಕೆ ಸಂಬಂದಿಸಿದ ಮಹಿಳಾ ಸಮಾಜಗಳು ಸಕ್ರಿಯವಾಗಿ ಪಾಲ್ಗೊಂಡಿದ್ದು ಅತ್ಯಂತ ವಿಶೇಷ ಎನ್ನಬಹುದು.
ಆತಿಥೇಯ ಹಾಗೂ ಅತಿಥಿ ಸಮಾಜಗಳ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯೆಯರೆಲ್ಲಗರಿಗೂ ಹೃತ್ಪೂರ್ವಕ ಅಭಿನಂದನೆಗಳು 💐💐💐
ಕಾರ್ಯಕ್ರಮ ಅಭೂತಪೂರ್ವವಾದ ಯಶಸ್ಸನ್ನು ಕಂಡಿತು.🥰🙏
🙏ಜೈನಂ ಜಯತು ಶಾಸನಂ🙏