ವಿಶ್ವಶಾಂತಿಗಾಗಿ ನಮೋಕಾರ ಮಂತ್ರ

ವಿಶ್ವಶಾಂತಿಗಾಗಿ ನಮೋಕಾರ ಮಂತ್ರ

ದಿನಾಂಕ 9/4/2025 ರಂದು ಪ್ರಪಂಚಾದ್ಯಂತ ಜಿತೋ ಸಂಘಟನೆಯ ನೇತೃತ್ವದಲ್ಲಿ ನಡೆದ "ವಿಶ್ವಶಾಂತಿಗಾಗಿ ನಮೋಕಾರ ಮಂತ್ರ " ಎಂಬ ಧ್ಯೇಯದಡಿಯಲ್ಲಿ ಆಯೋಜಿಸಲ್ಪಟ್ಟಿದ್ದ ಸಾಮೂಹಿಕ ನಮೋಕಾರ ಮಂತ್ರ ಪಠಣ ಕಾರ್ಯಕ್ರಮವನ್ನು ಉಜಿರೆ ಯ ಧೀಮತಿ ಮಹಿಳಾ ಸಮಾಜವು  ಆಯೋಜಿಸಿ ಯಶಸ್ವಿ ಯಾಗಿ ನಿರ್ವಹಿಸಿತು.ಇಂದು, "ಒಂದು ಜಗತ್ತು ಒಂದು ಮಂತ್ರ ವಿಶ್ವಶಾಂತಿಗಾಗಿ ಜೊತೆಯಲ್ಲಿ" ಎಂಬ ಉದಾತ್ತ ಧ್ಯೇಯದೊಂದಿಗೆ ವಿಶ್ವದಾದ್ಯಂತ ಆಯೋಜಿಸಲಾದ ನಮೋಕಾರ ಮಂತ್ರ ಪಠಣ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು. ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಸೋನಿಯಾ ಯಶೋವರ್ಮ ಅವರ ಮಾರ್ಗದರ್ಶನದಲ್ಲಿ ಸಂಘದ ಅಧ್ಯಕ್ಷರಾದ ಡಾ
ರಜತ ಪಿ.ಶೆಟ್ಟಿ ಅವರ ನೇತೃತ್ವದಲ್ಲಿ
ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು 108 ಬಾರಿ ನಮೊಕಾರ ಮಂತ್ರವನ್ನು ಪಠಿಸಿ  ಉತ್ಸಾಹದಿಂದ ಪಾಲ್ಗೊಂಡರು .ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು. ವಿಶ್ವ ಶಾಂತಿಗಾಗಿ ಸಾಮೂಹಿಕವಾಗಿ ಪಠಿಸಿದ ನಮೋಕಾರ ಮಂತ್ರವು ನೆರೆದಿದ್ದವರಲ್ಲಿ ಸಕಾರಾತ್ಮಕ ಕಂಪನಗಳನ್ನು ಮೂಡಿಸಿತು. ಸಮಿತಿಯ ಸಂಘಟನೆ ಹಾಗೂ ಸದಸ್ಯರ ಸಹಕಾರ ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಯಿತು.